Tuesday, February 28, 2012

Justice Delayed is Justice Denied-Final Appeal To the Commissioner



ಮಾನ್ಯರೇ,
ತಡವಾದ ನ್ಯಾಯ ತಿರಸ್ಕೃತವಾದ ನ್ಯಾಯಕ್ಕೆ ಸಮ ಎಂಬುದಾಗಿ ಕಾನೂನು ಶಾಸ್ತ್ರ ಹೇಳುತ್ತದೆ. ಅದಕ್ಕೆ ಕಾಲಮಿತಿ ಅಧಿನಿಯಮ ಅಮ್ಬುದಾಗಿ ಪ್ರತ್ಯೇಕ ಕಾನೂನೇ ಇದೆ. ಇದು ತಮಗೆ ಗೊತ್ತಿಲ್ಲ ಅಂತಾ ನಾನು ಇಲ್ಲಿ ಲಿಖಿಸುತ್ತಿಲ್ಲ. ಆದರೆ ನಾನು ನೀಡಿದ ನ್ಯಾಯಬದ್ಧ ಮನವಿಗಳಿಗೆ ನಿಮ್ಮ ಇಲಾಖೆ ಸ್ಪಂದಿಸುತ್ತಿರುವ ರೀತಿ ನನ್ನನ್ನು ಈ ಅಂತಿಮ ಮನವಿ ಬರೆಯುವಂತೆ ಪ್ರೇರೇಪಿಸಿದೆ.
ನಿಮ್ಮ ಇಲಾಖಾ ಅಧಿಕಾರಿಗಳಾದ ಶ್ರೀ ಕೆಂಪ ತಿಮ್ಮಯ್ಯ, ಶ್ರೀ ಟಿ ಎಲ್ ನಾರಾಯಣಸ್ವಾಮಿ ಇವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ನಿಮಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಿದೆ. ಅನುದಾನಕ್ಕೆ ಒಳಪಡದ ನೌಕರರ ಬಗ್ಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಿದೆ. ಆದರೆ ಇದುವರೆವಿಗೂ ನೀವು ಯಾವ ಕ್ರಮ ತೆಗೆದುಕೊಂಡ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮ್ಮ ಇಲಾಖೆಯಿಂದಲೇ ನಿಮ್ಮ ಇಲಾಖಾ ಅಧಿಕಾರಿಗಳ ಬಗ್ಗೆ ಇಲಾಖಾ ಮುಖ್ಯಸ್ಥರಾದ ನೀವು ಮಾಹಿತಿ ಪಡೆಯಲು ತಿಂಗಳು ಬೇಕಾದರೆ ಇನ್ನು ಸಾಮಾನ್ಯ ನಾಗರಿಕನ ಪಾಡೇನು?
ಸರ್ಕಾರವು ತನ್ನ ಪತ್ರದಲ್ಲಿ ನನ್ನ ದೂರುಗಳನ್ನೂ ಲಗತ್ತಿಸಿ ಸಮಗ್ರ ವರದಿ ಸಲ್ಲಿಸುವಂತೆ ನಿಮಗೆ ೦೮/೧೧/೨೦೧೧ರಲ್ಲಿಯೇ ಸೂಚಿಸಿದ್ದರು ನೀವುಗಳು ಯಾವ ಕಾರಣದಿಂದ ವಿಳಂಬ ಧೋರಣೆ ಅನುಸರಿಸುತ್ತಿರುವಿರಿ ಎಂಬುದು ನನಗೆ ತಿಳಿಯುತ್ತಿಲ್ಲ.
ಮಾನ್ಯರೇ ದಯಮಾಡಿ ಅರ್ಥಮಾಡಿಕೊಳ್ಳಿ. ಸದರಿ ನೌಕರರ ಶಿಸ್ತು ಪ್ರಾಧಿಕಾರ ನೀವುಗಳು. ನಾನು ನಿಮ್ಮ ಅನುಮತಿ ಇಲ್ಲದೆ ಮೊಕದ್ದಮೆ ದಾಕಲಿಸಿದಲ್ಲಿ ಇಲಾಖಾ ಮುಖ್ಯಸ್ಥರನ್ನು ಸಹಾ ಆರೋಪಿಯನ್ನಾಗಿ ಮಾಡಬೇಕಾಗುತ್ತದೆ. ಕಾರಣ ಸದರಿ ನೌಕರರ ಮೇಲಾಧಿಕಾರಿಗಳು ತಾವೇ ಮತ್ತು ಅನುಮತಿಯನ್ನು ತಾವು ಇದುವರೆವಿಗೂ ನೀಡಿಲ್ಲ. ಆದರೆ ನಾನು ತಾನೇ ಎಷ್ಟು ದಿನಗಳವರೆಗೆ ಕಾಯಲು ಸಾಧ್ಯ? ತಾವೇ ಯೋಚಿಸಿ ನೋಡಿ.. ವಿಳಂಬ ಆದರೆ ಪ್ರಕರಣವು ಕಾಲವಿಲಂಬದ ಆಧಾರದ ಮೇಲೆ ವಜಾ ಆಗುವ ವಿಚಾರ ತಮಗೂ ಗೊತ್ತು.
ಸರ್ಕಾರದ ಪತ್ರ ಬಂದ ಮೂರೂ ನಿಮ್ಮಿಂದ ಕ್ರಮಜರುಗಿಸಲು ಆಗಿಲ್ಲವೆಂಬುದು ವಿಶಾದನಿಯ ಸಂಗತಿ. ತಮ್ಮ ನೆನಪಿನಿಂದ ಸರ್ಕಾರದ ಪತ್ರ ಅಳಿಸಿಹೊಗಿದ್ದಿರಬಹುದು. ಅದಕ್ಕೆ ಮತ್ತೊಂದು ಬಾರಿ ಅದನ್ನು ನಿಮ್ಮ ನೆನಪಿಗೆ ತರುವ ಪುಟ್ಟ ಪ್ರಯತ್ನ ಅಷ್ಟೇ ಇದು........ ಅದು ಇಗಲಾದರು ಕ್ರಮ ತೆಗೆದುಕೊಂತಿರಾ ಅನ್ನೋ ನಂಬಿಕೆ ಹೊತ್ತುಕೊಂಡು....ಪ್ರಕಟಿಸಿದ್ದೇನೆ....

No comments:

Post a Comment