Improper maintenance of records and incomplete computerisation contributed to the delay in disposal of cases in the Pre-University Department
Click on this to visit Department of Technical EducationPublic Instruction
Thursday, April 23, 2015
Friday, April 17, 2015
ಇವುಗಳಿಗೆ ಉತ್ತರ ಕೊಡುವಿರಾ ?
ನಿರ್ದೇಶಕರೇ,
ನಿಮ್ಮ ಕಚೇರಿಯಲ್ಲಿ ನಡೆಯುತ್ತಿರುವ ನಿಯಮಬಾಹಿರ ಕೃತ್ಯಗಳನ್ನು ನಾನು ನ್ಯಾಯಾಲಯ ಮತ್ತು ಸಕ್ಷಮ ಪ್ರಾಧಿಕಾರ ಮತ್ತು ಮಾಧ್ಯಮಗಳಿಗೆ ತಿಳಿಯಪಡಿಸಬೇಕಾಗಿರುವುದರಿಂದ ನಾನು ಸಲ್ಲಿಸಿರುವ ಈ ಕೆಳಕಂಡ ಅರ್ಜಿಗಳಿಗೆ ನಿಮ್ಮಿಂದ ಸಮರ್ಪಕ ಉತ್ತರವನ್ನು ಅತ್ಯಂತ ಜರೂರಾಗಿ ಬಯಸಿರುತ್ತೇನೆ. ನಿಮ್ಮ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯನ್ನು ಜನರ ಮುಂದಿಡಲು ಇದು ಸಕಾಲ.
ನಿಮ್ಮಿಂದ ಮಾಹಿತಿಯ ನಿರೀಕ್ಷೆಯಲ್ಲಿರುವ
Thursday, April 16, 2015
See public TV on Director, Department of PU Education
Click on the following link for the Public TV Report on Smt Sushama Godabole, Director, Department of PU Education
Public TV Report
Public TV Report
Wednesday, April 15, 2015
ಅದಕ್ಷ ಅಧಿಕಾರಿಗಳ ಮೂರ್ಖತನದ ತೀರ್ಮಾನಗಳಿಂದಾಗಿ ಹಾಳಾದ ಪದವಿ ಪೂರ್ವ ಶಿಕ್ಷಣ ಇಲಾಖೆ,
ಇಲಾಖಾ ಮುಖ್ಯಸ್ಥರೇ,
ನಿಮ್ಮ ಕಾಲದಲ್ಲಿ ನಡೆಯುತ್ತಿರುವ ಈ "ಮಾಸ್ ಗ್ರೇಸ್ ಮಾರ್ಕ್ಸ್" ಹಿಂದೆಂದೂ ಕರ್ನಾಟಕ ಕೇಳಿರಲೇ ಇಲ್ಲ. ಈ ಶ್ರೇಯ ತಮಗೇ ಸಲ್ಲಬೇಕು. ಹೇಗಿದ್ದ ಇಲಾಖೆಯನ್ನು ಹೇಗೆ ಮಾಡಲಾಯಿತು? ನೀವು ಇಲಾಖೆಯನ್ನು ಮಾರಲು ಅಥವಾ ಇನ್ನೇನಾದರೂ ಮಾಡಲು ತೀರ್ಮಾನಿಸಿದ್ದೀರೋ ಹೇಗೆ? ಐ ಎ ಎಸ್ ಸರ್ಕಾರ ಕೊಟ್ಟ ಮಾತ್ರಕ್ಕೆ ಎಲ್ಲರೂ ಎಲ್ಲಾ ತಿಳಿದುಕೋ ಬೇಕು ಅಂತಾ ಇಲ್ಲ. ಜ್ಞಾನ ಯಾರೊಬ್ಬರ ಸ್ವತ್ತು ಅಲ್ಲ. ನಿಮ್ಮ ಬಳಿ ಇರುವ ಹೊಗಳು ಭಟ್ಟರನ್ನು ದೂರ ಇಡಿ. ಕೆಲಸ ಮಾಡುವ ಅಧಿಕಾರಿಗಳಿಗೆ ಪ್ರಾಮುಖ್ಯತೆ ಕೊಡಿ. ನಿಮ್ಮಲ್ಲಿ ಸರ್ಕಾರದ ಅನ್ನ ತಿನ್ನುತ್ತಿದ್ದೇನೆನ್ನುವ ಕಿಂಚಿತ್ತಾದರೂ ಪ್ರಾಮಾಣಿಕತೆ ಇದ್ದರೆ ಇಲಾಖೆಯನ್ನು ಪಾರದರ್ಷಕವನ್ನಾಗಿಸಿ ಆಡಳಿತ ನೀಡಿ. ಅದು ಬಿಟ್ಟು ರಿಟೈರ್ಡ್ ಆದ ಅಧಿಕಾರಿಗಳನ್ನು ರೀಟೈನ್ ಮಾಡಿಕೊಂಡು ನಡೆಸುತ್ತಿರುವ ನಿಮ್ಮ ಆಡಳಿತ ನಿಜಕ್ಕೂ ನಾಚಿಕೆಗೇಡು. ಹೀಗಂತಾ ನಾನು ಹೇಳುತ್ತಿಲ್ಲ. ಸಾರ್ವಜನಿಕರೇ ಹೇಳುತ್ತಿದ್ದಾರೆ... ಇದು ಮೀಡಿಯಾಗಳಲ್ಲೂ ಸಹಾ ಚರ್ಚೆಯಾಗಿರೋದು ನಿಮಗೂ ಗೊತ್ತು....
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆಯಲ್ಲಿ ಕೇಳಲಾಗಿರುವ ಈ ಕೆಳಗಿನ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯೇ?
■ What was the department doing till the evaluators brought the mistakes to its notice?
■ What happens to merit students who did not attempt wrong questions, thinking it is a waste of time?
■ What action will be initiated against the question paper setters?
■ What if a student misses the first rank in CET because he or she did not attempt a wrong question?
■ After evaluators flagged 13 questions as wrong in the English paper, on what basis did the authorities decide to grant just five grace marks?
ನಿಮ್ಮನ್ನು ಯಾರು ತಪ್ಪು ದಾರಿಗೆ ಎಳೆಯುತ್ತಿದ್ದಾರೋ ಅಥವಾ ಈ ಮೂರ್ಖತನದ ತೀರ್ಮಾನಗಳು ನಿಮ್ಮವೆಯೋ ನಮ್ಮಂತಹ ನಾಗರೀಕರಿಗೆ ಗೊತ್ತಿಲ್ಲ. ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡೋದನ್ನ ಬಿಟ್ಟುಬಿಡಿ. ನಿಮ್ಮ ಈ ರೀತಿಯಾದಂತಹಾ ಘನಂದಾರಿ "ಮಾಸ್ ಗ್ರೇಸ್ ಮಾರ್ಕ್ಸ್" ನಿಂದಾಗಿ ಇಲಾಖೆ ಇನ್ನೂ ಸಾವಿರಾರು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸಬೇಕಾಗುತ್ತದೆ. ಇದು ನೀವು ನಿರ್ದೇಶಕರಾಗಿ ಇಲಾಖೆಗೆ ನೀಡುತ್ತಿರುವ ಬಹು ದೊಡ್ಡ ಕೊಡುಗೆ !
"Let the noble thoughts come from all the side" ಎಂದು ಯೋಚಿಸಿದ್ದರೆ, ಹಿಟ್ಲರ್ ರೀತಿ ಸರ್ವಾಧಿಕಾರದ ಧೋರಣೆ ಬಿಟ್ಟಿದ್ದರೆ ಬಹುಶ: ಈ ರೀತಿಯಾಗಿ ಆಗುತ್ತಿರಲಿಲ್ಲ. ಇನ್ನು ಮುಂದಾದರೂ ಬ್ರಷ್ಟ ಅಧಿಕಾರಿಗಳನ್ನು ಇಲಾಖೆಯಿಂದ ಹೊರಗೆ ಹಾಕಿ ಚೆನ್ನಾಗಿ ನಿಯಮಗಳನ್ನು ಓದಿಕೊಂಡು ಕಾನೂನಿನನುಸಾರ ಕರ್ತವ್ಯ ನಿರ್ವಹಿಸಿ ಎಂದು ಆಶಿಸುವೆ
ಸಾರ್ವಜನಿಕ ಹಿತದೃಷ್ಟಿಯಿಂದ
ಪೋಷಕರ/ಜನಸಾಮಾನ್ಯರ ಪರವಾಗಿ
ಮಧು
ಬೆಂಗಳೂರು
Tuesday, April 07, 2015
ಏನೀ ಅಪಮೌಲ್ಯಮಾಪನ ?
ನಿರ್ದೇಶಕರೇ,
ಬರೀ ಪರೀಕ್ಷೆಗಳನ್ನು ನಡೆಸುವುದಷ್ಟೇ ಮುಖ್ಯವಲ್ಲ ! ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವೂ ಅಷ್ಟೇ ಪಾವಿತ್ರವಾದುದು ಎಂದು ಮಾಧ್ಯಮಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ತಿಳಿ ಹೇಳುವ ಕಾಲ ಬಂದಿದೆ. ನೋಡಿ೧, ನೋಡಿ ೨, ನೋಡಿ ೩, ನೋಡಿ ೪ , ನೋಡಿ ೫ , ನೋಡಿ ೬
ಕಳೆದ ಒಂದು ವಾರದಿಂದ ಸದಾ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜಂಟಿ ನಿರ್ದೇಶಕರ ಬೇಜವಾಬ್ದಾರಿತನದ ಉತ್ತರಗಳಿಂದಾಗಿ ಇನ್ನೂ ಎದುರಿಸಬೇಕಾದ ಪರಿಣಾಮಗಳು ಸಾಕಷ್ಟಿವೆ. ತನ್ನ ಕಚೇರಿಯಲ್ಲಿಯೇ ಸುಮಾರು ೬೫೦ ಕಡತಗಳನ್ನು ಬಾಕಿ ಇಟ್ಟುಕೊಂಡಿರುವ ನಿರ್ದೇಶಕರು ಅದ್ಯಾವ ಪರಿ ಕೆಲಸ ಮಾಡುತ್ತಿದ್ದರೆಂದು ನಾಗರೀಕರೇ ಹೇಳುತ್ತಿದ್ದಾರೆ. ದಿನಾಂಕ ೨೬/೦೩/೨೦೧೫ರ ನನ್ನ ಬ್ಲಾಗ್ ಬರಹದಲ್ಲಿ ಕೆಲವು ವಿಚಾರಗಳ ಬಗ್ಗೆ ತಿಳಿಯಪದಿಸಿದ್ದರೂ ಈ ಬಗ್ಗೆ ನಿಮ್ಮಿಂದ ಏಕೆ ಇದುವರೆವಿಗೂ ಉತ್ತರ ಬಂದಿಲ್ಲ? ಈಗಲಾದರೂ ಉತ್ತರಿಸಿರುವಿರಾ?
ಕಳೆದ ಒಂದು ವಾರದಿಂದ ಸದಾ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜಂಟಿ ನಿರ್ದೇಶಕರ ಬೇಜವಾಬ್ದಾರಿತನದ ಉತ್ತರಗಳಿಂದಾಗಿ ಇನ್ನೂ ಎದುರಿಸಬೇಕಾದ ಪರಿಣಾಮಗಳು ಸಾಕಷ್ಟಿವೆ. ತನ್ನ ಕಚೇರಿಯಲ್ಲಿಯೇ ಸುಮಾರು ೬೫೦ ಕಡತಗಳನ್ನು ಬಾಕಿ ಇಟ್ಟುಕೊಂಡಿರುವ ನಿರ್ದೇಶಕರು ಅದ್ಯಾವ ಪರಿ ಕೆಲಸ ಮಾಡುತ್ತಿದ್ದರೆಂದು ನಾಗರೀಕರೇ ಹೇಳುತ್ತಿದ್ದಾರೆ. ದಿನಾಂಕ ೨೬/೦೩/೨೦೧೫ರ ನನ್ನ ಬ್ಲಾಗ್ ಬರಹದಲ್ಲಿ ಕೆಲವು ವಿಚಾರಗಳ ಬಗ್ಗೆ ತಿಳಿಯಪದಿಸಿದ್ದರೂ ಈ ಬಗ್ಗೆ ನಿಮ್ಮಿಂದ ಏಕೆ ಇದುವರೆವಿಗೂ ಉತ್ತರ ಬಂದಿಲ್ಲ? ಈಗಲಾದರೂ ಉತ್ತರಿಸಿರುವಿರಾ?
Subscribe to:
Posts (Atom)