- ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು
- Udayavani | Mar 24, 2012
ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಪಿಯು ಕಾಲೇಜಿನ ಆರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.
ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರ ವರದಿ ಆಧಾರದ ಮೇಲೆ ಆರು ಉಪನ್ಯಾಸಕರನ್ನು ಅಮಾನತು ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ರಶ್ಮಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಉಪ ನಿರ್ದೇಶಕರಿಗೆ ಈ ಸಂಬಂಧ ಪತ್ರ ರವಾನಿಸಿದ್ದಾರೆ.
ಗುರುವಾರವಷ್ಟೇ 14 ಉಪನ್ಯಾಸಕರನ್ನು ಅಮಾನತು ಮಾಡಿ ನಾಲ್ಕು ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗಿತ್ತು. ಮುಂದುವರಿದ ಭಾಗವಾಗಿ ಮತ್ತೆ ಆರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.
ಈ ಮಧ್ಯೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ರಶ್ಮಿ ಮಹೇಶ್ ಅವರನ್ನು ಬೆಂಬಲಿಸಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಎಸ್‌ಎಂಎಸ್ ಅಭಿಯಾನ ಹಮ್ಮಿಕೊಂಡಿದ್ದಾರೆ.
ಮೊಬೈಲ್ ಫೋನ್‌ಗಳಲ್ಲಿ ರಶ್ಮಿ ಮಹೇಶ್ ಅವರನ್ನು ಬೆಂಬಲಿಸಿರುವ ಎಸ್‌ಎಂಎಸ್‌ಗಳು ಹರಿದಾಡುತ್ತಿದ್ದು, 'ರಶ್ಮಿ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರ ಅಧಿಕಾರವಧಿಯಲ್ಲಿ ಮಂಡಳಿ ಉತ್ತಮ ಕೆಲಸ ಮಾಡುತ್ತಿದೆ. ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಅವರನ್ನು ಬಲಿಪಶು ಮಾಡುತ್ತಿದೆ. ಅವರ ಒತ್ತಡಕ್ಕೆ ಮಣಿದು ರಶ್ಮಿ ಆವರನ್ನು ವರ್ಗಾವಣೆ ಮಾಡಿದರೆ ಹೋರಾಟ ನಡೆಸಲಾಗುವುದು' ಎಂಬ ಎಚ್ಚರಿಕೆಯನ್ನೂ ಎಸ್‌ಎಂಎಸ್ ಸಂದೇಶದ ಮೂಲಕ ನೀಡುತ್ತಿದ್ದಾರೆ.
Improper maintenance of records and incomplete computerisation contributed to the delay in disposal of cases in the Pre-University Department
Click on this to visit Department of Technical EducationPublic Instruction
Sunday, March 25, 2012
ಆಯುಕ್ತೆ ರಶ್ಮಿಯವರ ಪರವಾಗಿ ವಿದ್ಯಾರ್ಥಿಗಳ ಎಸ್ ಎಂ ಎಸ್ ಅಭಿಯಾನ :ಉದಯವಾಣಿ ವರದಿ
ಪ್ರಶ್ನೆ ಪತ್ರಿಕೆ ಬಯಲು:ಆಯುಕ್ತೆ ರಶ್ಮಿಯವರ ಬಗ್ಗೆ ಪತ್ರಿಕೆಗಳು ಏನು ಹೇಳುತ್ತವೆ? ಅವಲೋಕನ
ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು: ಸಿಐಡಿ ತನಿಖೆ ತೀವ್ರ
ಬೆಂಗಳೂರು: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದ ತನಿಖೆ ತೀವ್ರಗೊಂಡಿದೆ. ಸಿಐಡಿ ಪೊಲೀಸರು ಎಲ್ಲ ಕಡೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಿಐಡಿ ಡಿಜಿಪಿ ಆರ್.ಕೆ.ದತ್ತ ಅವರು ಶನಿವಾರ ಪ್ರಕರಣ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಕೆಲವೊಂದು ವಿವರಗಳನ್ನು ಪಡೆದುಕೊಂಡರು.
ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದ ಹಿಂದೆ ದೊಡ್ಡ ಜಾಲವಿದೆ. ವಾಮಮಾರ್ಗದ ಮೂಲಕ ಹಣ ಮಾಡುವ ಮತ್ತು ಪರೀಕ್ಷಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಉದ್ದೇಶದಿಂದ ದುಷ್ಟಶಕ್ತಿಗಳು ಈ ರೀತಿಯ ಕೆಲಸ ಮಾಡಿದ್ದು, ಇಲಾಖೆಯ ಕೆಲ ಸಿಬ್ಬಂದಿ ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಇದರ ಹಿಂದೆ ಕಾಣದ ವ್ಯಕ್ತಿಗಳ ಕೈವಾಡವಿದ್ದು, ಕೆಲ ವರ್ಷಗಳಿಂದ ಅವರು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೇವಲ ಪಿಯುಸಿ ಪ್ರಶ್ನೆಪತ್ರಿಕೆಗಳು ಅಷ್ಟೇ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಸಹ ಬಹಿರಂಗ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಸಿಕ್ಕಿಹಾಕಿಕೊಂಡಾಗ ಅವರನ್ನು ಬಂಧಿಸಿದರೂ, ಒತ್ತಡ ತಂದು ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಾರೆ. ಆ ಗುಂಪಿನವರೇ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಹಿರಂಗ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿ ಮಾರಾಟವಾಗಿವೆ. ಆದರೆ ಮೊದಲು ಬೆಂಗಳೂರಿನಲ್ಲಿ ಬಹಿರಂಗವಾಗಿದ್ದು, ಇಲ್ಲಿಂದಲೇ ಬೇರೆ ಬೇರೆ ಕಡೆಗಳಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಖಜಾನೆಯಿಂದ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಅಥವಾ ಮುದ್ರಣಾಲಯದಿಂದ ಬಹಿರಂಗವಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಕೈವಾಡ: ಆಯುಕ್ತರಾದ ವಿ.ರಶ್ಮಿ ಅವರು ಇಲಾಖೆಯಲ್ಲಿ ಕೆಲವೊಂದು ಸುಧಾರಣೆಗಳನ್ನು ತರುವ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದು, ಮಾನ್ಯತೆ ನವೀಕರಣ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಅನುಮತಿ ನೀಡುವುದು, ಅರೆಕಾಲಿಕ ಉಪನ್ಯಾಸಕರ ವೇತನ ಬಿಡುಗಡೆ ಸೇರಿದಂತೆ ಎಲ್ಲವನ್ನೂ ಕಾನೂನುಬದ್ಧವಾಗಿಯೇ ಮಾಡುತ್ತಿದ್ದರು. ಅವ್ಯವಹಾರಕ್ಕೆ ಆಸ್ಪದ ನೀಡುತ್ತಿರಲಿಲ್ಲ, ಸುಳ್ಳು ಅಂಕಿಸಂಖ್ಯೆಗಳನ್ನು ನೀಡಿ ಇಲಾಖೆಯನ್ನು ದಿಕ್ಕುತಪ್ಪಿಸಲು ಖಾಸಗಿ ಸಂಸ್ಥೆಗಳಿಗೆ ಆಸ್ಪದ ಇರಲಿಲ್ಲ. ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಆಡಳಿತ ಮಂಡಳಿಗಳು ಕಾಣದ ಕೈಗಳೊಂದಿಗೆ ಷಾಮೀಲಾಗಿ ಈ ರೀತಿಯ ಕೆಲಸ ಮಾಡಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನೋಟಿಸ್ ಪಡೆದಿರುವ ಕಾಲೇಜಿನವರು ಬಹಿರಂಗಗೊಂಡಿರುವ ಪ್ರಶ್ನೆಪತ್ರಿಕೆಗಳನ್ನು ಹಣಕ್ಕೆ ಖರೀದಿ ಮಾಡಿದ್ದಾರೆ. ಬೆಂಗಳೂರಿನಿಂದಲೇ ಎಲ್ಲ ಕಡೆಗೆ ಪ್ರಶ್ನೆಪತ್ರಿಕೆಗಳು ಹೋಗಿದ್ದು, ಇಲಾಖೆಯ ಕೆಲ ಅಧಿಕಾರಿಗಳು ಕೈಜೋಡಿಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಗೂಂಡಾ ಕಾಯ್ದೆಯಡಿ ಬಂಧಿಸಿ: ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಈಗಿರುವ ಕಾಯ್ದೆ ಪ್ರಕಾರ ಅವರಿಗೆ ಎರಡು ಸಾವಿರ ರೂಪಾಯಿ ದಂಡ, ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, ಸುಲಭವಾಗಿ ಜಾಮೀನು ಸಿಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರೆ ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಬೇಕು ಎಂದು ಪೋಷಕರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ: ಐವರ ಆಮಾನತು
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಐವರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಖಾಸಗಿ ಕಾಲೇಜುಗಳಿಗೆ ಮಾನ್ಯತೆ ರದ್ದುಪಡಿಸುವ ಸಂಬಂಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಈಗಾಗಲೇ 14 ಉಪನ್ಯಾಸಕರನ್ನು ಅಮಾನತುಗೊಳಿಸಿ, ನಾಲ್ಕು ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಚಿಂತಾಮಣಿಯ ವಿಜಯ ಮತ್ತು ಕೋಲಾರದ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿಗೂ ಶನಿವಾರ ನೋಟಿಸ್ ನೀಡಲಾಗಿದೆ.
ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭೌತವಿಜ್ಞಾನ ಉಪನ್ಯಾಸಕ ಎನ್.ಮುನಿಕೃಷ್ಣಪ್ಪ, ಜೀವವಿಜ್ಞಾನ ಉಪನ್ಯಾಸಕ ಎ.ಮಂಜುನಾಥ್, ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಜೀವವಿಜ್ಞಾನ ವಿಷಯದ ಉಪನ್ಯಾಸಕರಾದ ಕೆ.ಎನ್.ಮಂಜುನಾಥ ರೆಡ್ಡಿ, ಶ್ರೀನಿವಾಸಪ್ಪ, ಚಿಂತಾಮಣಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಉಬೇದುಲ್ಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ ಅವರು `ಪ್ರಜಾವಾಣಿ`ಗೆ ತಿಳಿಸಿದರು.
ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು: ಸಿಐಡಿ ತನಿಖೆ, 14 ಉಪನ್ಯಾಸಕರ ಸಸ್ಪೆಂಡ್
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿವಿಧ ಸರ್ಕಾರಿ ಕಾಲೇಜುಗಳ 14 ಉಪನ್ಯಾಸಕರನ್ನು ಅಮಾನತುಗೊಳಿಸಿದೆ.
ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದ ಹಿಂದೆ ವ್ಯವಸ್ಥಿತ ಜಾಲ ಇರುವ ಸಂಶಯದ ಹಿನ್ನೆಲೆಯಲ್ಲಿ ಗುರುವಾರ ಸಿಐಡಿ ತನಿಖೆ ಆರಂಭವಾಗಿದ್ದು, ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸೋಮವಾರ ಗಣಿತ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾದ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಂತಾಮಣಿಯ ಮೂರು ಮತ್ತು ಚಿಕ್ಕಬಳ್ಳಾಪುರದ ಒಂದು ಖಾಸಗಿ ಪದವಿ ಪೂರ್ವ ಕಾಲೇಜಿಗೆ ಮಾನ್ಯತೆ ರದ್ದುಪಡಿಸುವ ಸಂಬಂಧ ಷೋಕಾಸ್ ನೋಟಿಸ್ ನೀಡಲಾಗಿದೆ.
ಘಟನೆ ಸಂಬಂಧ ಚಿಂತಾಮಣಿಯಲ್ಲಿ ಪ್ರದೀಪ್ ಮತ್ತು ವೆಂಕಟೇಶ್ ಎಂಬುವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಈಶ್ವರ್ ನಾಪತ್ತೆಯಾಗಿದ್ದಾನೆ. ಪ್ರದೀಪ್ ಜೆರಾಕ್ಸ್ ಅಂಗಡಿ ಮಾಲೀಕ. ವೆಂಕಟೇಶ್ ತಂಗಿ ಪಿಯುಸಿ ಓದುತ್ತಿದ್ದು, ಆಕೆಗೆ ಪ್ರಶ್ನೆಪತ್ರಿಕೆ ಪಡೆಯಲು ವೆಂಕಟೇಶ್ ಜೆರಾಕ್ಸ್ ಅಂಗಡಿಗೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಲ್ಲದೆ ಅಶ್ವತ್ಥ ನಾರಾಯಣ, ರಂಜಿತ್ ಹಾಗೂ ಸುದರ್ಶನ ಎಂಬುವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಗುರುವಾರ ನಗರದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಪ್ರಶ್ನೆ ಪತ್ರಿಕೆಗಳನ್ನು ಸರಬರಾಜು ಮಾಡಿದ್ದು, ಪ್ರತಿ ಪ್ರಶ್ನೆ ಪತ್ರಿಕೆಯನ್ನು 40 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ತರೀಕೆರೆ ತಾಲ್ಲೂಕು ಅಜ್ಜಂಪುರ ಹೋಬಳಿ ಕುಡ್ಲೂರು ಪ್ರಾಥಮಿಕ ಶಾಲೆ ಶಿಕ್ಷಕ ಸಿದ್ರಾಮಪ್ಪ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಚಿಂತಾಮಣಿಯ ವೆಂಕಟಾದ್ರಿ, ರಾಯಲ್, ಪ್ರಗತಿ ಪದವಿ ಪೂರ್ವ ಕಾಲೇಜು ಮತ್ತು ಚಿಕ್ಕಬಳ್ಳಾಪುರದ ಶಾಂತಿನಿಕೇತನ ಪದವಿ ಪೂರ್ವ ಕಾಲೇಜಿಗೆ ನೋಟಿಸ್ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಮಕೂರು, ಶ್ರೀನಿವಾಸಪುರ, ಬೆಂಗಳೂರಿನ ಯಲಹಂಕ ನ್ಯೂಟೌನ್, ನಾಗರಬಾವಿ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಭೌತ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಆ ವಿಷಯದ ಪರೀಕ್ಷೆಯನ್ನು ಇಲಾಖೆ ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಗಣಿತ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಬೆನ್ನಲ್ಲೇ ಭೌತವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯೂ ಬಹಿರಂಗವಾಗಿರುವುದರಿಂದ ಪೋಷಕರು, ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದು ಮತ್ತು ಪರೀಕ್ಷೆ ಮುಂದೂಡಿರುವುದನ್ನು ಖಂಡಿಸಿ ಗುರುವಾರ ಹಲವೆಡೆ ಪ್ರತಿಭಟನೆಗಳು ನಡೆದಿವೆ.
ಹಿಂದಿನ ವರ್ಷಗಳ ಹಾಗೆ ಈ ವರ್ಷವೂ ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇಷ್ಟಾದರೂ ಪ್ರಶ್ನೆಪತ್ರಿಕೆಗಳು ಹೇಗೆ ಬಹಿರಂಗವಾದವು ಎಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆಯ ನಂತರವೇ ಸ್ಪಷ್ಟ ಉತ್ತರ ದೊರೆಯಲು ಸಾಧ್ಯ ಎಂದು ಅವರು ಉತ್ತರಿಸಿದರು.
ಗಣಿತ ವಿಷಯದ ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ವೆಂಕಟಾದ್ರಿ ಕಾಲೇಜಿಗೆ ಗುರುವಾರ ತಂಡವೊಂದನ್ನು ಕಳುಹಿಸಲಾಗಿತ್ತು. ತಂಡದ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಕಾಲೇಜುಗಳ ಉಪನ್ಯಾಸಕರು, ಖಾಸಗಿ ಕಾಲೇಜುಗಳಲ್ಲಿ ಪಾಠ ಮಾಡುತ್ತಿರುವುದಲ್ಲದೆ, ಪ್ರಶ್ನೆಪತ್ರಿಕೆ ಬಹಿರಂಗವಾಗಲು ಕಾರಣರಾಗಿದ್ದಾರೆ ಎಂಬ ಮಾಹಿತಿ ಇದೆ. ತನಿಖೆ ನಂತರವೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.
ತನಿಖೆ ಆರಂಭ:ಸರ್ಕಾರದ ಸೂಚನೆಯಂತೆ ಗುರುವಾರ ಸಿಐಡಿ ತನಿಖೆ ಆರಂಭವಾಗಿದೆ. ಒಟ್ಟು ಐದು ತಂಡಗಳನ್ನು ರಚಿಸಲಾಗಿದ್ದು, ಸಂಶಯದ ಮೇಲೆ ಕೆಲ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೋಮವಾರದ ಒಳಗೆ ಸುಳಿವು ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಗುರುವಾರ ಬೆಳಿಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಆಯುಕ್ತರಾದ ವಿ.ರಶ್ಮಿ ಅವರೊಂದಿಗೆ ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದು, ಮುಂದೆ ಈ ರೀತಿ ಆಗುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಕಾಡುತ್ತಿರುವ ಪ್ರಶ್ನೆ: ಪ್ರಶ್ನೆಪತ್ರಿಕೆಗಳು ಮುದ್ರಣವಾಗುವ ಸ್ಥಳದಲ್ಲಿ ಅಥವಾ ಖಜಾನೆಯಲ್ಲಿ ಮಾತ್ರ ಬಹಿರಂಗವಾಗಲು ಸಾಧ್ಯ. ಯಾವ ಕಡೆಯಿಂದ ಬಹಿರಂಗವಾಯಿತು ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳಾದ ಪುಟ್ಟರಾಜು, ನವೀನ್ ಕುಮಾರ್, ಅಜಯ್ ಕುಮಾರ್ ಮತ್ತು ಶಶಿಕಲಾ ತಲೆಮರೆಸಿಕೊಂಡಿದ್ದಾರೆ. ಗಿರಿನಗರ ಹಾಗೂ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಉದಯವಾಣಿ
- ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು
- Udayavani | Mar 24, 2012
ಬೆಂಗಳೂರು: ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಪಿಯು ಕಾಲೇಜಿನ ಆರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.
ಪ್ರಶ್ನೆ ಪತ್ರಿಕೆ ಬಯಲು ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರ ವರದಿ ಆಧಾರದ ಮೇಲೆ ಆರು ಉಪನ್ಯಾಸಕರನ್ನು ಅಮಾನತು ಮಾಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ರಶ್ಮಿ ಆದೇಶ ಹೊರಡಿಸಿದ್ದಾರೆ. ಕೋಲಾರ ಜಿಲ್ಲೆಯ ಉಪ ನಿರ್ದೇಶಕರಿಗೆ ಈ ಸಂಬಂಧ ಪತ್ರ ರವಾನಿಸಿದ್ದಾರೆ.
ಗುರುವಾರವಷ್ಟೇ 14 ಉಪನ್ಯಾಸಕರನ್ನು ಅಮಾನತು ಮಾಡಿ ನಾಲ್ಕು ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗಿತ್ತು. ಮುಂದುವರಿದ ಭಾಗವಾಗಿ ಮತ್ತೆ ಆರು ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ.
ಈ ಮಧ್ಯೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ರಶ್ಮಿ ಮಹೇಶ್ ಅವರನ್ನು ಬೆಂಬಲಿಸಿ ರಾಜ್ಯಾದ್ಯಂತ ವಿದ್ಯಾರ್ಥಿಗಳು ಎಸ್‌ಎಂಎಸ್ ಅಭಿಯಾನ ಹಮ್ಮಿಕೊಂಡಿದ್ದಾರೆ.
ಮೊಬೈಲ್ ಫೋನ್‌ಗಳಲ್ಲಿ ರಶ್ಮಿ ಮಹೇಶ್ ಅವರನ್ನು ಬೆಂಬಲಿಸಿರುವ ಎಸ್‌ಎಂಎಸ್‌ಗಳು ಹರಿದಾಡುತ್ತಿದ್ದು, 'ರಶ್ಮಿ ಅವರು ದಕ್ಷ, ಪ್ರಾಮಾಣಿಕ ಅಧಿಕಾರಿ. ಅವರ ಅಧಿಕಾರವಧಿಯಲ್ಲಿ ಮಂಡಳಿ ಉತ್ತಮ ಕೆಲಸ ಮಾಡುತ್ತಿದೆ. ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಅವರನ್ನು ಬಲಿಪಶು ಮಾಡುತ್ತಿದೆ. ಅವರ ಒತ್ತಡಕ್ಕೆ ಮಣಿದು ರಶ್ಮಿ ಆವರನ್ನು ವರ್ಗಾವಣೆ ಮಾಡಿದರೆ ಹೋರಾಟ ನಡೆಸಲಾಗುವುದು' ಎಂಬ ಎಚ್ಚರಿಕೆಯನ್ನೂ ಎಸ್‌ಎಂಎಸ್ ಸಂದೇಶದ ಮೂಲಕ ನೀಡುತ್ತಿದ್ದಾರೆ.
- ಪಿಯುಸಿಗೆ ಕ್ಲಸ್ಟರ್ ಪದ್ಧತಿ ಜಾರಿಗೆ ಎಂದು?
- Udayavani | Mar 24, 2012
ಕಲಬುರ್ಗಿ: ದಿನಕ್ಕೊಂದು ಪ್ರಶ್ನೆ ಪತ್ರಿಕೆ ಬಹಿರಂಗಗೊಂಡರೆ ಪರೀಕ್ಷೆ ನಡೆಸೋದು ಹೇಗೆ?... ಇದು ಸದ್ಯ ಪಿಯು ಪರೀಕ್ಷಾ ಮಂಡಳಿ ಹಾಗೂ ಶಿಕ್ಷಣ ತಜ್ಞರನ್ನು ಕಾಡುತ್ತಿರುವ ಪ್ರಶ್ನೆ.
ಪ್ರಶ್ನೆಪತ್ರಿಕೆ ಬಹಿರಂಗಗೊಳ್ಳಲು ಪಿಯು ಮಂಡಳಿ ನಿರ್ಲಕ್ಷéದ ಜತೆಗೆ ಹಲವು ಕಾರಣಗಳಿರಬಹುದು. ಆ ಹಲವು ಕಾರಣಗಳಲ್ಲಿ ಕಳೆದ ಮೂರು ವರ್ಷಗಳಿಂದ ಜಾರಿಗೊಳಿಸಬೇಕೆಂದಿರುವ ಕ್ಲಸ್ಟರ್ ಪದ್ಧತಿ ಅಳವಡಿಸದೇ ಇರುವುದೂ ಒಂದು. ಪಿಯುಸಿ ಪರೀಕ್ಷೆಗೂ ಕ್ಲಸ್ಟರ್ ಪದ್ಧತಿ ಜಾರಿ ತಂದರೆ ಪರೀಕ್ಷೆಯಲ್ಲಿ ಕಠಿಣತೆ ತರಬಹುದಲ್ಲದೇ ಸಾಮೂಹಿಕ ನಕಲು ತಡೆಯುವುದರ ಜತೆಗೆ ಪ್ರಶ್ನೆ ಪತ್ರಿಕೆ ಬಹಿರಂಗಕ್ಕೂ ಕಡಿವಾಣ ಹಾಕಬಹುದಾಗಿದೆ. ಆಯಾ ಕಾಲೇಜು ಸಂಸ್ಥೆಗಳು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಪ್ರಶ್ನೆಪತ್ರಿಕೆಗಳನ್ನು ಬಹಿರಂಗಗೊಳಿಸುತ್ತಿದ್ದಾರೆ. ಆದರೆ ಒಂದು ಕಾಲೇಜಿನ ವಿದ್ಯಾರ್ಥಿಗಳು ನೂರಾರು ಕಾಲೇಜುಗಳಿಗೆ ಹಂಚಿ ಹೋದರೆ ಪ್ರಶ್ನೆ ಪತ್ರಿಕೆ ಬಹಿರಂಗಪಡಿಸಿದರೂ ವಿದ್ಯಾರ್ಥಿಗಳಿಗೆ ಗೌಪ್ಯವಾಗಿ ತಲುಪಿಸಲು ಸಾಧ್ಯವಿಲ್ಲ. ಈಗ ಆಯಾ ಕಾಲೇಜಿನಲ್ಲಿಯೇ ಪರೀಕ್ಷೆ ಬರೆಯುತ್ತಿರುವುದರಿಂದ ಪ್ರಶ್ನೆ ಪತ್ರಿಕೆ ಬಹಿರಂಗ ಎಂಬ ಎಡವಟ್ಟಿಗೆ ಕಾರಣವಾಗುತ್ತಿದೆ.
ಪ್ರಶ್ನೆ ಪತ್ರಿಕೆ ಬಹಿರಂಗಕ್ಕೆ ಕಾರಣರಾದ ಉಪನ್ಯಾಸಕರನ್ನು ಅಮಾನತು ಮಾಡಿರಬಹುದು ಲಕ್ಷಾಂತರ ವಿದ್ಯಾರ್ಥಿಗಳ ಆತಂಕ ಕೊನೆಗೊಳ್ಳುವುದೇ ಕಠಿಣ ಪರಿಶ್ರಮದಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರೀಕ್ಷೆಗೆ ತಯಾರಾಗುತ್ತಾರೆ. ಆದರೆ ಹೀಗೆ ದಿಢೀರನೇ ಪ್ರಶ್ನೆಪತ್ರಿಕೆ ಬಹಿರಂಗಗೊಂಡು ಪರೀಕ್ಷೆ ಮುಂದೂಡಿದರೆ ಆಗುವ ಅನಾಹುತಗಳಿಗೆ ಯಾರು ಜವಾಬ್ದಾರರು? ಮರು ಪರೀಕ್ಷೆ ನಡೆಸಿದರೆ ಜವಾಬ್ದಾರಿ ಮುಗಿಯಿತೇ? ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಕೇಳುತ್ತಿದ್ದಾರೆ.
ಎಸ್.ಎಸ್.ಎಲ್.ಸಿ, ಬಿ.ಎಡ್, ಡಿ.ಎಡ್. ಎಂ.ಎಡ್ ಸೇರಿದಂತೆ ಇತರೆ ಎಲ್ಲ ಪರೀಕ್ಷೆಗಳಿಗೆ ಕ್ಲಸ್ಟರ್ ಪದ್ಧತಿ ಅಳವಡಿಸಲಾಗಿದೆ. ಆದರೆ, ಪಿಯುಸಿಗೆ ಮಾತ್ರ ಕ್ಲಸ್ಟರ್ ಪದ§ತಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗುತ್ತಿಲ್ಲ.
ಕ್ಲಸ್ಟರ್ ಎಂದರೇನು?: ಒಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಲ್ಫಾಬಿಟ್ಸ್ ಪ್ರಕಾರ ವಿವಿಧ ಪರೀûಾ ಕೇಂದ್ರಗಳಿಗೆ ಹಂಚುವುದೇ ಕ್ಲಸ್ಟರ್ ಪದ್ಧತಿ. ಈ ಪದ್ಧತಿಯಡಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪರೀಕ್ಷಾ ಕೇಂದ್ರಗಳನ್ನು ಹೊರತುಪಡಿಸಿ ಬೇರೇ ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.
ಈ ಕ್ಲಸ್ಟರ್ ಪದ್ಧತಿ ಪರೀಕ್ಷೆಯಿಂದ ಸಾಮೂಹಿಕ ನಕಲು ತಡೆಯಬಹುದಾಗಿದೆ. ನಕಲು ತಡೆಯಲು ಹಾಗೂ ಪರೀಕ್ಷೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕ್ಲಸ್ಟರ್ ಪದ್ಧತಿ ಜಾರಿಗೆ ತರಲಾಗಿದೆ.
ಕ್ಲಸ್ಟರ್ ಪದ್ಧತಿ ಅಳವಡಿಸಿದರೆ ಪ್ರತಿಷ್ಠಿತ ಕಾಲೇಜು ಹಾಗೂ ಸರಕಾರಿ ಕಾಲೇಜು ಎಂಬ ಭೇದಭಾವವಿಲ್ಲದೆ ಎಲ್ಲ ವಿದ್ಯಾರ್ಥಿಗಳನ್ನು ಸಮೀಕರಣಗೊಳಿಸಬಹುದಾಗಿದೆ. ಈ ಪದ್ಧತಿ ಜಾರಿಗೆ ಬಂದರೆ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಸಹ ಸರಕಾರಿ ಕಾಲೇಜಿನ ಪರೀûಾ ಕೇಂದ್ರದಲ್ಲಿ ಹಾಗೂ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದಂತಾಗುತ್ತದೆ.
ಜಾರಿಗೆ ಹಿಂದೇಟು ಏಕೆ?
ಪ್ರತಿಷ್ಠಿತ ಕಾಲೇಜುಗಳ ಆಡಳಿತ ಮಂಡಳಿಗಳ ಒತ್ತಡವೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಪಿಯುಸಿಗೆ ಕ್ಲಸ್ಟರ್ ಪದ್ಧತಿ ಜಾರಿಗೆ ತಂದರೆ ತಮ್ಮ ಸಂಸ್ಥೆಯ ಕಾಲೇಜಿನ ಫಲಿತಾಂಶ ಕುಂಠಿತವಾಗುವುದೆಂಬ ಭೀತಿಯ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜಿನ ಪಿಯುಸಿ ಕಾಲೇಜಿನ ಆಡಳಿತ ಮಂಡಳಿಗಳು ಸರಕಾರದ ಮೇಲೆ ಒತ್ತಡ ತಂದು ಕ್ಲಸ್ಟರ್ ಪದ್ಧತಿ ಜಾರಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಮುಂದಿನ ವರ್ಷ ಜಾರಿ
ಪ್ರಶ್ನೆಪತ್ರಿಕೆ ಬಹಿರಂಗಗೊಂಡ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಗುರುವಾರ ತುರ್ತುಸಭೆ ಸೇರಿದ ಪಿಯು ಆಡಳಿತ ಮಂಡಳಿಯ ನಿರ್ದೇಶಕರು, ಮುಂದಿನ ವರ್ಷದಿಂದ ಕಡ್ಡಾಯವಾಗಿ ಕ್ಲಸ್ಟರ್ ಪದ್ಧತಿ ಪರೀಕ್ಷೆ ಜಾರಿ ತರುವ ಬಗ್ಗೆ ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪರೀಕ್ಷೆ ಮೇಲೆ ಹಿಡಿತ ಸಾಧಿಸಲು ಈ ಪದ್ಧತಿ ಜಾರಿ ತರುವುದು ಅನಿವಾರ್ಯ ಎಂದು ಪಿಯು ಮಂಡಳಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಗಟ್ಟಿಯಾಗಿ ಹೇಳಿದ್ದಕ್ಕೆ ಸಭೆಯಲ್ಲಿ ಇದ್ದ ಇತರರು ಬೆಂಬಲ ಸೂಚಿಸಿದರು ಎಂದು ವರದಿಯಾಗಿದೆ. ಮುಂದಿನ ವರ್ಷ ಕ್ಲಸ್ಟರ್ ಪದ್ಧತಿ ಜಾರಿ ಬರುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ.
ಡೆಕ್ಕನ್ ಹೆರಾಲ್ಡ್An attempt to cripple PU exam system
Muthi-ur-Rahman Siddiqui, Bangalore, Mar 22, 2012, DHNS :The leak of the Mathematics and Physics papers within a span of three days is being suspected to be part of a pre-meditated design to cripple the Department of Pre-University Education’s (DPUE) existing examination system.
This is for the first time in its history that the DPUE, which will have to adopt the National Curriculum Framework (NCF) for I PU Science stream from next year, faces a serious crisis of credibility.
Once the Physics paper was leaked and the manner in which all three sets were distributed -- in some places free of cost — raised doubts among DPUE officials that it could be the work of private colleges acting in tandem with some of its own staff to scuttle the NCF. “This is being suspected to be one of the motivating factors for the network to leak the two papers within a span of three days,” an official said.
A powerful lobby, comprising officials from some private colleges, a platform of businessmen owning companies that publish/print PU-level textbooks and some private coaching institutes are being suspected to have engineered the leaks in their bid to defeat the NCF’s implementation.
The lobby is peeved at Rashmi V Mahesh, Commissioner, DPUE, for many reasons. The adoption of the NCF for I PUC Science is one of them. The NCF’s adoption will severely damage the interests of private colleges and coaching centres. A uniform syllabus will mean students will not have to pay separately for various entrance examinations.
What’s more, there are reports of the leakage of all four core subjects in the science stream. The Biology paper, held on March 16, is also suspected to have been leaked. The DPUE, however, has denied it.
This year’s II PUC examination may go down in history as one of the most embarrassing for the DPUE. But is the DPUE so incompetent that it cannot guard the question papers of one of the most important examination of a student’s career?
It is not. Rashmi has raised doubts about the motive of the scamsters. “They are not after money. Why else would the leaked question papers be distributed free to the students? The entire system is the target,” she said.
If well-placed sources are to be believed, the scamsters want to oust Rashmi. The involvement of private college lobby has not been ruled out. That the leaked papers were being distributed at private colleges and coaching institutes only leads credence to this suspicion.
Besides, the textbook lobby is angry. The NCF will ensure there is a single textbook for all PUC streams. So, the multiple textbooks will vanish from the market.
The introduction of online counselling for admission to undergraduate courses is another thorn in the private colleges’ flesh.
Sources privy to the development said that the finger was now being pointed at Rashmi and her credibility is at stake.- ಡಿ
Thursday, March 22, 2012
ಪಿ.ಸಿ.ಎಂ.ಬಿ ಪ್ರಶ್ನೆ ಪತ್ರಿಕೆ ಬಯಲು-ಕೀ ಉತ್ತರಗಳೊಂದಿಗೆ: ಯಾರ ಕೈವಾಡ?
ಇದೀಗ ಜೀವಶಾಸ್ತ್ರ ಹಾಗು ಗಣಿತಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಬಯಲಾಗಿರುವ ಬೆನ್ನಲ್ಲೇ ಬೌತ ಶಾಸ್ತ್ರ ಪ್ರಶ್ನೆ ಪತ್ರಿಕೆ ಗಳು ಬಯಲಾಗಿರುವ ಸುದ್ಧಿ ಅಚ್ಚರಿಯೇನಲ್ಲ . ಕಾರಣ ನಾನು ಆಯುಕ್ತರನ್ನು ಭೇಟಿಯಾದಾಗ (ದಿನಾಂಕ ೨೦.೦೩.೨೦೧೨) ಜೀವಶಾಸ್ತ್ರ ಹಾಗು ಗಣಿತಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಬಯಲಾಗಿರುವ ಬಗ್ಗೆ ಪ್ರಸ್ತಾಪಿಸಿದ್ದು, ಆಯುಕ್ತರ ಕಚೇರಿಯಿಂದ ಹೊರಬಂದ ತಕ್ಷಣವೇ ಶ್ರೀ ಪೂಣಚ್ಚ ಇವರನ್ನು ಕಂಡು ಕೋಲಾರದಲ್ಲಿ ಬೌತ ಶಾಸ್ತ್ರ ಹಾಗು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳು ಬಿಕರಿಯಾಗುತ್ತವೆ ಎಂದು ನಿಮ್ಮ ಆಯುಕ್ತಾಲಯಕ್ಕೆ ಬಂದಿದ್ದ ಉಪನ್ಯಾಸಕ ವೃಂದದಲ್ಲಿಯೇ ಗುಸುಗುಸು ಮಾತನಾಡುತ್ತಿದ್ದಾರೆ ಇದರ ಬಗ್ಗೆ ಆಯುಕ್ತರ ಗಮನಕ್ಕೆ ತನ್ನಿ ಎಂದು ಕೊರಿದ್ದೇನು. ತದನಂತರ ಏನಾಯಿತೋ ತಿಳಿಯೆ. ನನ್ನ ಕೆಲಸದಲ್ಲಿ ನಾನು ಮುಳುಗಿದೆ. ಈ ದಿನ ನನ್ನ ಅನುಮಾನಕ್ಕೆ ಪುಷ್ಟಿ ದೊರೆಯಿತು. ಇದರಲ್ಲಿ ಆಯುಕ್ತಾಲಯದ ಅಧಿಕಾರಿಗಳ ಕೈವಾಡ ಇರುವ ಬಗ್ಗೆ ತನಿಖೆ ನಡೆಸಬೇಕಾಗಿದೆ. ನಿಮ್ಮಂತಹಾ ದಕ್ಷ ಅಧಿಕಾರಿಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ತಂದಿರುವ ಇಲಾಖಾ ದ್ರೋಹಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಈಗ ಇಲಾಖೆಗಿದೆ.
Wednesday, March 21, 2012
ಆನ್‌ಲೈನ್ ಸಿಇಟಿ ಕೌನ್ಸಿಲಿಂಗ್ ಹೇಗಿರುತ್ತದೆ ?-ಉದಯವಾಣಿ ವರದಿ
- ಪ್ರಸಕ್ತ ಸಾಲಿನಿಂದಲೇ ಜಾರಿ ; 12 ಸಹಾಯವಾಣಿ ಕೇಂದ್ರಗಳು
- Udayavani | Mar 20, 2012
ಬೆಂಗಳೂರು : ಬಹುನಿರೀಕ್ಷಿತ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆಯಲ್ಲಿ ಆನ್‌ಲೈನ್ ಕೌನ್ಸೆಲಿಂಗ್ ಜಾರಿಗೆ 'ನೀಲ ನಕ್ಷೆ' ಸಿದ್ಧಗೊಂಡಿದ್ದು, ಅನುಷ್ಠಾನ ಪ್ರಕ್ರಿಯೆ ಮಾತ್ರ ಬಾಕಿ ಇದೆ.
ಈ ಸಂಬಂಧ ಕಳೆದ ಐದು ತಿಂಗಳಿಂದ ಸೂರತ್ಕಲ್, ಹೈದ್ರಾಬಾದ್ ಹಾಗೂ ದೆಹಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ರಾಜ್ಯಕ್ಕೆ ಅನುಕೂಲವಾಗುವ ವಿಶೇಷ ಮಾದರಿಯೊಂದನ್ನು ಈಗ ಕಂಡುಕೊಂಡಿದೆ. ಆ ಮೂಲಕ ದೇಶದಲ್ಲಿ ಮೊದಲ ಬಾರಿ ಎಲ್ಲ ವೃತ್ತಿಪರ ಕೋರ್ಸ್‌ಗಳ ಸೀಟು ಹಂಚಿಕೆ ಆನ್‌ಲೈನ್‌ನಲ್ಲೇ ನಡೆಯಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಈಗಾಗಲೇ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕರಿಸಿದ್ದು, ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಹೊಮಿಯೋಪತಿ, ಯುನಾನಿ ಹಾಗೂ ಎಂಜಿನಿಯರಿಂಗ್ ಸೀಟುಗಳು ಆನ್‌ಲೈನ್ ಮೂಲಕವೇ ಹಂಚಿಕೆಯಾಗಲಿವೆ. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಲಾಗ್‌ಇನ್ ಐಡಿ ಹಾಗೂ ಪಾಸ್‌ವರ್ಡ್ ನೀಡುವ ಮೂಲಕ ವಿದ್ಯಾರ್ಥಿಗೆ ಅನುಕೂಲವಾಗುವ ಸೀಟು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಹಾಗಾಗಿ, ಈ ಬಾರಿ ಪ್ರಾಧಿಕಾರದ ಕಚೇರಿಗೆ ವಿದ್ಯಾರ್ಥಿಗಳ ಅಲೆದಾಟ ತಪ್ಪಲಿದೆ.
ನೂತನ ವ್ಯವಸ್ಥೆ ಕಾರ್ಯವೈಖರಿ
ಆನ್‌ಲೈನ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ರಾಜ್ಯಾದ್ಯಂತ ಸ್ಥಾಪಿಸಿರುವ 12 ಸಹಾಯವಾಣಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ದಾಖಲೆ ಪರಿಶೀಲನೆಗೆ ಆಗಮಿಸಿದಾಗ ಆನ್‌ಲೈನ್ ಪ್ರಕ್ರಿಯೆ ಕುರಿತು ವಿಶೇಷ ತರಬೇತಿ ನೀಡಲಾಗುವುದು. 1.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಸುಮಾರು 70 ಸಾವಿರ ವಿದ್ಯಾರ್ಥಿಗಳು ಕೌನ್ಸಿಲಿಂಗ್ ಎದುರಿಸುವ ಸಾಧ್ಯತೆ ಇದೆ.
ಸಿಇಟಿ ವೆಬ್‌ಸೈಟ್‌ನ ಹೋಮ್‌ಪೇಜ್‌ನ ಬಲಭಾಗದಲ್ಲಿರುವ ಆಯ್ಕೆಗಳ ಮೇಲೆ ವಿದ್ಯಾರ್ಥಿ ಕ್ಲಿಕ್ ಮಾಡಿದರೆ ಕಾಲೇಜು ಹಾಗೂ ಕೋರ್ಸ್‌ಗಳ ಆಯ್ಕೆಪಟ್ಟಿ ಬರುತ್ತದೆ. ನಂತರ ವಿದ್ಯಾರ್ಥಿ ತನ್ನ ಆಸಕ್ತ ವಿಷಯ ಹಾಗೂ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಹಿಡಿತ ಸಾಧಿಸಿದ ವಿದ್ಯಾರ್ಥಿ ಮನೆಯಲ್ಲೇ ಕುಳಿತು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಬಹುದು!
ಆನ್‌ಲೈನ್ ಪ್ರಕ್ರಿಯೆಗೆ ಪ್ರತಿ ವಿದ್ಯಾರ್ಥಿಗೆ ರಾಜ್ಯದ 33 ವೈದ್ಯಕೀಯ ಕಾಲೇಜುಗಳು ಹಾಗೂ 186 ಎಂಜಿನಿಯರಿಂಗ್ ಕಾಲೇಜುಗಳ 14 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದು, ಎಂಜಿನಿಯರಿಂಗ್ ಪ್ರವೇಶ ಬಯಸುವ ವಿದ್ಯಾರ್ಥಿಗೆ 2604 ಆಯ್ಕೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗೆ 33 ಆಯ್ಕೆಗಳಿರುತ್ತವೆ.
ಆ ವಿದ್ಯಾರ್ಥಿಗಳಿಗೆ ರ್‍ಯಾಂಕ್ ಆಧಾರದ ಮೇಲೆ ಮೈಕ್ರೊಸಾಫ್ಟ್ ಹಾಗೂ ಓರಾಕಲ್ ತಂತ್ರಜ್ಞಾನವನ್ನು ಬಳಸಿ ತಯಾರಿಸಿರುವ ವಿಶೇಷ ಸಾಫ್ಟ್ವೇರ್ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಹಂಚುತ್ತದೆ. ಪ್ರತಿ ಕಾಲೇಜಿಗೆ ಪ್ರತ್ಯೇಕ ಸಂಕೇತ ನೀಡಲಾಗಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು 'ಉದಯವಾಣಿ'ಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸಹಾಯವಾಣಿ ಮೂಲಕ ತರಬೇತಿ ನೀಡಿದ ನಂತರ ಸುಮಾರು ಹತ್ತು ದಿನ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿ ತನ್ನ ಆಯ್ಕೆಯನ್ನು ನಿರ್ದಿಷ್ಟಗೊಳಿಸಿ, ಆನ್‌ಲೈನ್‌ನಲ್ಲಿ ನೀಡುವ ರಸೀದಿಯನ್ನು ಹೊಂದಿರಬೇಕು. ನಂತರ ಸೀಟು ಹಂಚಿಕೆಯ ಅಣಕು ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುತ್ತದೆ. ವಿದ್ಯಾರ್ಥಿಗೆ ತನಗೆ ಸಿಕ್ಕ ಸೀಟಿನ ಬಗ್ಗೆ ತೃಪ್ತನಾಗಿದ್ದರೆ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದು. ಇಲ್ಲದಿದ್ದರೆ ಆಯ್ಕೆಗಳನ್ನು ಬದಲಾಯಿಸಲೂ ಅವಕಾಶವಿರುತ್ತದೆ. ಕೊನೆಗೆ ರ್‍ಯಾಂಕ್ ಆಧಾರದ ಮೇಲೆ ಅಂತಿಮ ಸುತ್ತಿನ ಸೀಟು ಹಂಚಿಕೆಯ ಪಟ್ಟಿ ಪ್ರಕಟವಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
ಎಂದಿನಂತೆ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲೂ ಪ್ರವೇಶ ಸುತ್ತು, ಮೀಸಲಾತಿ ಸುತ್ತು ಹಾಗೂ ಸಾಂದರ್ಭಿಕ ಸುತ್ತಿನಲ್ಲಿ ವಿದ್ಯಾರ್ಥಿ ಸ್ಪರ್ಧಿಸಲು ಅವಕಾಶವಿರುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೌನ್ಸೆಲಿಂಗ್ ಕುರಿತು ಮಾಹಿತಿ ಕೈಪಿಡಿ, ಸಿಡಿ ಹಾಗೂ ಟೋಲ್ ಫ್ರೀ ನಂಬರ್‌ನ್ನು ಸಿಇಟಿ ಪರೀಕ್ಷೆ ನಂತರ ನೀಡಲಾಗುತ್ತದೆ.
ಸಹಾಯವಾಣಿ ಕೇಂದ್ರಗಳು ಎಲ್ಲೆಲ್ಲಿ ?
ಕಾರವಾರ, ಧಾರವಾಡ, ಬೆಂಗಳೂರು , ಚಿತ್ರದುರ್ಗ, ಗುಲ್ಬರ್ಗ, ಬಳ್ಳಾರಿ, ಮಂಗಳೂರು , ಮೈಸೂರು, ರಾಯಚೂರು, ಧಾರವಾಡ, ಶಿವಮೊಗ್ಗ, ಬಿಜಾಪುರ ಸಹಾಯವಾಣಿಗಳನ್ನು ತೆರೆಯಲಾಗುವುದು.
ಕೌನ್ಸಿಲಿಂಗ್ ಪ್ರಕ್ರಿಯೆ ಪ್ರಾರಂಭ ?
1. ಮೇ 3 ಮತ್ತು 4 ಪರೀಕ್ಷೆ.
2. ಮೇ 31 ಫಲಿತಾಂಶ ಪ್ರಕಟ.
3. ಜೂನ್ 6ರಿಂದ 20ರವರೆಗೆ ದಾಖಲೆಗಳ ಪರಿಶೀಲನೆ.
4. ಜೂನ್ 10ರಿಂದ 20ರವರೆಗೆ ಆಯ್ಕೆಗೆ ಅವಕಾಶ .
5. ಜುಲೈ 22 ಅಣಕು ಸೀಟು ಹಂಚಿಕೆ ಪಟ್ಟಿ ಪ್ರಕಟ.
6. ಜುಲೈ 25ರಿಂದ ಆಗಸ್ಟ್ 13 ಅಂತಿಮ ಮೂರು ಸುತ್ತುಗಳ ಸೀಟು ಹಂಚಿಕೆ ಕೌನ್ಸಿಲಿಂಗ್.
ಪ್ರಶ್ನೆ ಪತ್ರಿಕೆ ಬಯಲು-ದಿನಪತ್ರಿಕೆಗಳ ವರದಿ ಏಪ್ರಿಲ್ ೧ಕ್ಕೆ ಮರುಪರೀಕ್ಷೆ ಎಂದು ಬರೆದ ವಾರ್ತಾ ಭಾರತಿ ದಿನಪತ್ರಿಕೆ !
ಗಣಿತ ಪ್ರಶ್ನೆ ಪತ್ರಿಕೆ ಬಯಲಾದ ಬಗ್ಗೆ ವಿವಿಧ ಪತ್ರಿಕೆಗಳ ವರದಿಗಳು ಇಂತಿವೆ :
ಪ್ರಜಾವಾಣಿ:
ಬೆಂಗಳೂರು: ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಮಂಗಳವಾರ (ಮಾ.20) ನಡೆಯಬೇಕಿದ್ದ ದ್ವಿತೀಯ ಪಿಯುಸಿ ಗಣಿತ ವಿಷಯದ ಪರೀಕ್ಷೆ ಯನ್ನು ಏಪ್ರಿಲ್ ಮೂರಕ್ಕೆ ಮುಂದೂ ಡಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.
ಘಟನೆ ಸಂಬಂಧ ಈಗಾಗಲೇ ಚಿಂತಾಮಣಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಂಗಳವಾರ ನಡೆಯಬೇಕಿದ್ದ ಗಣಿತ ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಚಿಂತಾಮಣಿ, ಮುಳಬಾಗಿಲು, ಮಾಲೂರು ಸೇರಿದಂತೆ ಹಲವೆಡೆ ಸೋಮವಾರ ಸಂಜೆ ಬಹಿರಂಗವಾಗಿರುವ ಸುದ್ದಿ ಕೇಳಿಬಂತು. ಆದರೆ ಮಧ್ಯರಾತ್ರಿವರೆಗೂ ಇದು ಖಚಿತವಾಗಲಿಲ್ಲ.
ಬಹಿರಂಗವಾಗಿರುವ ಪ್ರಶ್ನೆಪತ್ರಿಕೆ ಮತ್ತು ಮೂಲ ಪ್ರಶ್ನೆಪತ್ರಿಕೆ ಒಂದೇ ಆಗಿರುವುದು ತೀವ್ರ ಪರಿಶೀಲನೆ ನಂತರ ಖಚಿತವಾಯಿತು ಎನ್ನಲಾಗಿದೆ.
ಏಪ್ರಿಲ್ 3ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಸೂಚಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಆ ದಿನ ಪರೀಕ್ಷೆಗೆ ಹಾಜರಾಗಬೇಕು.
ಇನ್ನೂ ಗೊತ್ತಾಗಿಲ್ಲ: ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದು ಹೇಗೆ ಎಂಬುದು ಇನ್ನೂ ಗೊತ್ತಾಗಿಲ್ಲ. ಪರೀಕ್ಷೆಯ ದಿನವೇ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಯಾ ತಾಲ್ಲೂಕಿನ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರ ತೆಗೆದು ಸಂಬಂಧಪಟ್ಟ ಕಾಲೇಜುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಆದರೆ ಸೋಮವಾರವೇ ಪ್ರಶ್ನೆಪತ್ರಿಕೆ ಹೇಗೆ ಹೊರಗೆ ಬಂತು ಎಂಬುದು ಅಧಿಕಾರಿಗಳಿಗೂ ಗೊತ್ತಾಗುತ್ತಿಲ್ಲ.
ಮೊದಲಿಗೆ ಚಿಂತಾಮಣಿಯ ವೆಂಕಟಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಯಿತು. ಇದಾದ ನಂತರ ಮುಳಬಾಗಿಲು, ಮಾಲೂರಿನಲ್ಲೂ ಇದೇ ರೀತಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿರುವುದು ಖಚಿತವಾಯಿತು ಎಂದು ಅವರು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಬೆಳಗಿನ ಜಾವ ಪರೀಕ್ಷೆ ಮುಂದೂಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಪರೀಕ್ಷೆ ಮುಂದೂಡಿರುವ ವಿಷಯ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಬರುವವರೆಗೂ ಗೊತ್ತಾಗಿರಲಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವ ವಿಷಯ ಕೇಳಿ ಗಾಬರಿಗೆ ಒಳಗಾದರು.
ಕನ್ನಡ ಪ್ರಭ: ಚಿಂತಾ ಮಣಿಯಲ್ಲಿ ದೂರು ದಾಖಲು
ಕನ್ನಡ ಪ್ರಭ: ಪರೀಕ್ಷೆಗೆ ಮುನ್ನವೇ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಯಲು?
ಉದಯವಾಣಿ
- ಏ. 3 ರಂದು ಗಣಿತ ಪರೀಕ್ಷೆ
- Udayavani | Mar 20, 2012
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಬಯಲಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ (ಮಾ. 20) ನಡೆಯಬೇಕಿದ್ದ ಗಣಿತ ಪರೀಕ್ಷೆಯನ್ನು ಏ.3 ಕ್ಕೆ ಮುಂದೂಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಆಯುಕ್ತರಾದ ರಶ್ಮಿ ವಿ ಮಹೇಶ್ ತಿಳಿಸಿದ್ದಾರೆ
ಏ . 3ರಂದು ಪರೀಕ್ಷೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.15 ರವರೆಗೆ ನಡೆಯಲಿದ್ದು, ಈಗಾಗಲೇ ನಿಗದಿ ಪಡಿಸಿರುವ ಪರೀಕ್ಷಾ ಕೇಂದ್ರಗಳಲ್ಲೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು.
ಮಂಗಳವಾರ ನಡೆಯಬೇಕಿದ್ದ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋಮವಾರ ರಾತ್ರಿಯೇ ಕೋಲಾರ, ಮಂಡ್ಯ ಹಾಗೂ ಗುಲ್ಬರ್ಗಗಳಲ್ಲಿ ಬಹಿರಂಗಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ.ಗಣಿತ ಪರೀಕ್ಷೆ ಹೊರತುಪಡಿಸಿ ಉಳಿದ ವಿಷಯದ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೆ, ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮುಂದಿನ ವರ್ಷದಿಂದ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ವಿಜಯಕರ್ನಾಟಕ ಪೇಪರ್ ಕ್ಲಿಪಿಂಗ್ಸ್ ಇಲ್ಲಿವೆ
ಒಬ್ಬ ಪರೀಕ್ಷಾರ್ಥಿಗೆ 11 ಸಿಬ್ಬಂದಿ!-ಪ್ರಜಾವಾಣಿ ವರದಿ

ಈ ಘಟನೆ ನಡೆದಿದ್ದು ಇಲ್ಲಿಗೆ ಸಮೀಪದ ಕಡಣಿ ಗ್ರಾಮದ ಶ್ರೀ ಪರಮಾನಂದ ಭೋಗಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ.
ದೇವಣಗಾಂವದ ಪ್ರಗತಿ ಶಿಕ್ಷಣ ಸಂಸ್ಥೆಯ ಕಾಲೇಜಿನ ವಿದ್ಯಾರ್ಥಿನಿ ಯೊಬ್ಬಳು ಭೂಗೋಳಶಾಸ್ತ್ರ ವಿಷಯ ತೆಗೆದುಕೊಂಡಿದ್ದರಿಂದ ಪರೀಕ್ಷೆ ಬರೆಯುತ್ತಿದ್ದಳು. ಒಬ್ಬ ಕೊಠಡಿ ಮೇಲ್ವಿಚಾರಕ, 3 ಜನ ಸ್ಕ್ವಾಡ್, ಒಬ್ಬ ಮಹಿಳಾ ಪರಿಶೀಲಕಿ, ಒಬ್ಬ ಉತ್ತರಪತ್ರಿಕೆ ಪಾಲಕ, ಒಬ್ಬ ಪ್ರಶ್ನೆಪತ್ರಿಕೆ ಪಾಲಕ, ಕೇಂದ್ರದ ಮುಖ್ಯಸ್ಥ, ಜಂಟಿ ಪರೀಕ್ಷಾಧಿಕಾರಿ, ಕಾರ್ಯಾಲಯದ ಗುಮಾಸ್ತ, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 11 ಜನ ಸಿಬ್ಬಂದಿ ಪರೀಕ್ಷೆ ಕೇಂದ್ರದಲ್ಲಿ ಕರ್ತವ್ಯ ನಿಭಾಯಿಸುತ್ತ್ದ್ದಿದುದು ಕಂಡು ಬಂದಿತು.
ಪ್ರಜಾವಾಣಿ ವರದಿಗೆ ಇಲ್ಲಿ ಕ್ಲಿಕ್ಕಿಸಿ....
Tuesday, March 20, 2012
ದ್ವಿತೀಯ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆ ಬಯಲು? ಕನ್ನಡ ಪ್ರಭ ವರದಿ
ಈ ದಿನದ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಬಂದಿರುವ ಈ ಕೆಳಗಿನ ವರದಿಯನ್ನು ಗಮನಿಸಲು ಕೋರಿದ್ದೇನೆ.
ವರದಿ ತಿಳಿಯಲು ಇದರ ಮೇಲೆ ಕ್ಲಿಕ್ ಮಾಡಿ
Tuesday, March 13, 2012
ಕಾಲೇಜು ಮ್ಯಾಪಿಂಗ್ ಇಲ್ಲದೆ ಹೊಸ ಕಾಲೇಜು ಮಂಜೂರಾತಿ-ಇಲಾಖೆಯ ಅವೈಜ್ಞಾನಿಕ ಕ್ರಮ: ಅನುದಾನಿತ ಉಪನ್ಯಾಸಕರಿಗೆ ತಪ್ಪುವ ಕಾರ್ಯಭಾರ
ಒಮ್ಮೊಮ್ಮೆ ಈ ಅಧಿಕಾರಿಗಳು ಹೀಗ್ಯಾಕೆ ಮಾಡುತ್ತಾರೋ ಅಂತಾ ನನಗೆ ಅನ್ನಿಸುವುದುಂಟು. ಕಾರಣ ಆಯುಕ್ತರ ಪೈಲ್ ಡಿಸ್ಪೋಸಲ್ ನೋಡಿದಾಗ ಸಾಕಷ್ಟು ಕಡತಗಳು ಹೊಸ ಕಾಲೇಜು ಮಂಜೂರಾತಿಗೆ ಸಂಬಂದಿಸಿದಂತವು. ಇಲಾಖೆಯಲ್ಲಿ ಈ ಹಿಂದೆ ಇದ್ದ ಸ್ಕೂಲ್ ಮ್ಯಾಪಿಂಗ್ ಪದ್ಧತಿ ಈಗ ಇಲ್ಲದಾಗಿದೆ. ಪರಿಣಾಮ :-
ಒಂದು ಕಡೆ ಅನುದಾನಿತ ಕಾಲೇಜುಗಳಲ್ಲಿ ನೌಕರರಿಗೆ ನಿಗದಿತ ಕಾರ್ಯಭಾರಕ್ಕಿಂತ ಕಡಿಮೆ ಇದೆ ಅನ್ನೋ ಪಟ್ಟಿ ಸಿದ್ಧಪಡಿಸುವಿಕೆ
ಮತ್ತೊಂದೆಡೆ ಹೊಸ ಅನುದಾನ ರಹಿತ ಕಾಲೇಜುಗಳ ಮಂಜೂರಾತಿ.
ಹೊಸ ಅನುದಾನ ರಹಿತ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿ ಅನುದಾನಿತ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಬಹುದು ಎಂದು ಯೋಚಿಸಿದರೆ ಸೂಕ್ತ. ಇದರಲ್ಲಿ ನನ್ನ ಸ್ವಾರ್ಥ ಏನು ಇಲ್ಲವಾದರೂ ಇಲಾಖೆಗೆ ಒಳಿತಾಗುವಂಥಹಾ ಕ್ರಮವನ್ನು ಅಧಿಕಾರಿಗಳು ಜರುಗಿಸಿದರೆ ಒಳ್ಳೆಯದೆಂದು ನನ್ನ ಭಾವನೆ....
Friday, March 09, 2012
ಪಿಯು ಉಪನ್ಯಾಸಕರ ನೇಮಕ: ಬಿ.ಇಡಿ ಕಡ್ಡಾಯವಲ್ಲ-ಪ್ರಜಾವಾಣಿ ವಾರ್ತೆ
ಉಪನ್ಯಾಸಕರ ನೇರ ನೇಮಕಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ರೂಪಿಸಿರುವ ವಿಶೇಷ ನೇಮಕಾತಿ ನಿಯಮಗಳಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಲಾಗಿತ್ತು. ಸ್ನಾತಕೋತ್ತರ ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದೆ ಇರುವುದರಿಂದ ಹಾಗೂ ಏಕಾಏಕಿ ಬಿ.ಇಡಿ ಕಡ್ಡಾಯ ಮಾಡಿರುವುದರಿಂದ ಸ್ನಾತಕೋತ್ತರ ಪದವೀಧರರಿಗೆ ಅನ್ಯಾಯವಾಗಲಿದೆ ಎಂದು `ಪ್ರಜಾವಾಣಿ` ವಿಶೇಷ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಬಿ.ಇಡಿ ವಿದ್ಯಾರ್ಹತೆಯನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 1765 ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆದಷ್ಟು ಬೇಗ ಅರ್ಜಿ ಆಹ್ವಾನಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ `ಪ್ರಜಾವಾಣಿ`ಗೆ ತಿಳಿಸಿದರು.
ಕಲೆ, ವಿಜ್ಞಾನ, ವಾಣಿಜ್ಯ ಈ ಮೂರು ವಿಭಾಗಗಳ ಸ್ನಾತಕೋತ್ತರ ಪದವೀಧರರಿಗೂ ಈ ತಿದ್ದುಪಡಿ ಅನ್ವಯಿಸಲಿದೆ ಎಂದು ಹೇಳಿದರು.
Click on this to read news in prajavani
ಪದವಿ ಪೂರ್ವ ಶಿಕ್ಷಣ ಇಲಾಕೆಯ ಸ್ವಾಗತಾರ್ಹ ಕ್ರಮ-ಕನ್ನಡ ಪ್ರಭ
- Ôæà×ÚÄß *¨ÚÁé, ÈÚßMsÚÀ
ÌOÚÐy BÅÛSæ¾Úß ÑÛ‡VÚ}ÛÔÚ% OÚÃÈÚß (®Ú}ÚÃVÚ×Úß)ಕನ್ನಡ ಪ್ರಭ ದಿನಾಂಕ ೦೯.೦೩.೨೦೧೨
Thursday, March 08, 2012
ನಿಮ್ಮ ವೆಬ್ ಸೈಟ್ ನಲ್ಲಿ ಇರುವ ಕಾಂಟ್ಯಾಕ್ಟ್ ಅಸ್ ಕಾಲಂ ನಲ್ಲಿ ಬದಲಾವಣೆ ತನ್ನಿ; ಮಹಾದೇವಪ್ಪನವರ ಹೆಸರನ್ನು ತೆಗೆದುಹಾಕಿ
ನಿಮ್ಮ ವೆಬ್ ಸೈಟ್ ನಲ್ಲಿ ಇರುವ ಕಾಂಟ್ಯಾಕ್ಟ್ ಅಸ್ ಕಾಲಂ ರಶ್ಮಿ ಐ ಎ ಎಸ್ ನಿರ್ದೇಶಕರು ಎಂದು ಈಗಲೂ ರಾರಾಜಿಸುತ್ತಿದೆ. ಜಂಟಿ ನಿರ್ದೇಶಕರ ಸ್ಥಾನದಲ್ಲಿ ಶ್ರೀ ಮಹಾದೇವಪ್ಪನವರ ಹೆಸರು ಇನ್ನು ಇದೆ. ಅದಕ್ಕೆ ಆದಷ್ಟು ಬೇಗ ಬದಲಾವಣೆ ತನ್ನಿ. ರಶ್ಮಿ ಐ ಎ ಎಸ್, ಆಯುಕ್ತರು ಎಂದು ಬದಲಿಸಿ, ಮಹಾದೇವಪ್ಪನವರ ಹೆಸರನ್ನು ತೆಗೆದುಹಾಕಿ.
ಪ್ರತಿ ದಿನ ವೆಬ್ ಸೈಟ್ ಅಪ ಡೇಟ್ ಮಾಡುವ ಇಲಾಕೆ ಡಿಸೆಂಬರ್ ೨೦೧೧ರಲ್ಲಿ ಆದ ಬದಲಾವಣೆಯನ್ನು ೬೫ ದಿನಗಳಾದರೂ ಯಾಕೆ ಜಾರಿಗೆ ತರಲಿಲ್ಲವೋ ಕಾಣೆ....ಆಯುಕ್ತರು ಈ ಬಗ್ಗೆ ಗಮನ ಹರಿಸುತ್ತಾರೆಂದು ಆಶಿಸುತ್ತೇನೆ........
Tuesday, March 06, 2012
ಪ್ರವೇಶ ಪತ್ರದಲ್ಲಿ ವರ್ಗ ವಿವರಕ್ಕೆ ಆಕ್ಷೇಪ-ವಿಜಯಕರ್ನಾಟಕ ವರದಿ
Monday, March 05, 2012
ಎರಡು ಕಡೆ ವೇತನ ಪಡೆದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗು ಅದಕ್ಕೆ ಸಹಕರಿಸಿದ ಶ್ರೀ ಕೆಂಪ ತಿಮ್ಮಯ್ಯನ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ?

ಮಾನ್ಯರೇ,
ಕನ್ನಡಪ್ರಭದಲ್ಲಿ ವರದಿ ಪ್ರಕಟವಾಗಿದ್ದರೂ, ಅಂದಿನ ಡಿ ಡಿ ಕ್ರಮ ತೆಗೆದುಕೊಳ್ಳದೆ ಇರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಸದರಿ ವಿಚಾರದ ಬಗ್ಗೆ ವರದಿ ನೀಡಿ ಎಂಬುದಾಗಿ ನೀವುಗಳು ಉಪನಿರ್ದೆಷಕರಿಗೆ ಸೂಚಿಸಿದ್ದರೂ ಇದುವರೆವಿಗೂ ವರದಿ ಸಲ್ಲಿಸದಿರುವ ಬಗ್ಗೆ ಕಾರಣ ನನಗೆ ತಿಳಿದುಬರುತ್ತಿಲ್ಲ. ಇದು ಪ್ರಕರಣ ಮುಚ್ಚಿಹಾಕಲು ನಿಮ್ಮ ಕೈಕೆಳಗಿನ ಅಧಿಕಾರಿಗಳು ನಡೆಸುತ್ತಿರುವ ವ್ಯವಸ್ಥಿತ ಸಂಚೆ? ಇದರ ಬಗ್ಗೆ ನೀವೇ ಕ್ರಮ ತೆಗೆದುಕೊಳ್ಳಬೇಕಾಗಿದೆ. ತಮ್ಮ ಅವಗಾಹನೆಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಬ್ಲಾಗ್ ನಲ್ಲಿ ಪ್ರಕಟಿಸಿದ್ದೇನೆ.
Friday, March 02, 2012
ಆಯುಕ್ತರಿಗೊಂದು ಬಹಿರಂಗ ಪತ್ರ-ನಿಮ್ಮಂತಹಾ ಐ ಎ ಎಸ್ಅಧಿಕಾರಿಗಳು ಪದವಿ ಪೂರ್ವ ಶಿಕ್ಷಣ ಇಲಾಕೆಗೆ ಹಾಗು ಕೆ.ಇ.ಎಬೇಕು......

ಮಾನ್ಯರೇ,
ನನ್ನ ಲಾ ಸ್ಕೂಲ್ ನ ಸಿನಿಯರ್ ಒಬ್ಬರು ಆಕ್ಸೆಸ್ ಟು ಪ್ರೊಫೆಶನಲ್ ಎಜುಕೇಶನ್ ಎಂಬ ವಿಚಾರದ ಬಗ್ಗೆ ಥೀಸಿಸ್ ಬರೆಯುವ ಉದ್ದೇಶದಿಂದ ಮಾಹಿತಿ ಕೇಳಲು ಬಂದಿದ್ದಕ್ಕೆ ಕೆ.ಇ.ಎನ ಅಧಿಕಾರಿ (ಕುಲಕರ್ಣಿ) ಮಾಹಿತಿ ನೀಡಲು ಇಪ್ಪತ್ತೈದು ಸಾವಿರ ನೀಡಿ ಅಂತಾ ನಾಚಿಕೆ ಬಿಟ್ಟು ಕೇಳಿದರೂ ಅಂತಾ ಬಹಳ ನೊಂದುಕೊಂಡು ಹೇಳಿದರು. ಅಂತಹವರ ಮೇಲೆ ತಾವು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲವೇ? ನಿಮ್ಮ ಕೆ.ಇ.ಎನ ಕೆಲವು ಅಧಿಕಾರಿಗಳು ಆ ಪ್ರಾಧಿಕಾರ ಬಿಟ್ಟು ಹೊರನಡೆದರೆ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀವು ನಿಜವಾಗಿ ನೆರವಾದಂತಾಗುತ್ತದೆ.
ವಿಜಯಕರ್ನಾಟಕ ಪತ್ರಿಕೆಯನ್ನು ತಾವು ನೋಡಿರುತ್ತೀರಿ. ಆದರೂ ನನ್ನ ಬ್ಲಾಗ್ನಲ್ಲಿ ಈ ವರದಿಯ ಪ್ರತಿ ಇರಲಿ ಎಂಬ ಆಶಯ ನನ್ನದು...ಅದಕ್ಕೆಈ ಬ್ಲಾಗ ಪೊಸ್ಟ್ ...
Tuesday, February 28, 2012
Justice Delayed is Justice Denied-Final Appeal To the Commissioner
ಮಾನ್ಯರೇ,
ತಡವಾದ ನ್ಯಾಯ ತಿರಸ್ಕೃತವಾದ ನ್ಯಾಯಕ್ಕೆ ಸಮ ಎಂಬುದಾಗಿ ಕಾನೂನು ಶಾಸ್ತ್ರ ಹೇಳುತ್ತದೆ. ಅದಕ್ಕೆ ಕಾಲಮಿತಿ ಅಧಿನಿಯಮ ಅಮ್ಬುದಾಗಿ ಪ್ರತ್ಯೇಕ ಕಾನೂನೇ ಇದೆ. ಇದು ತಮಗೆ ಗೊತ್ತಿಲ್ಲ ಅಂತಾ ನಾನು ಇಲ್ಲಿ ಲಿಖಿಸುತ್ತಿಲ್ಲ. ಆದರೆ ನಾನು ನೀಡಿದ ನ್ಯಾಯಬದ್ಧ ಮನವಿಗಳಿಗೆ ನಿಮ್ಮ ಇಲಾಖೆ ಸ್ಪಂದಿಸುತ್ತಿರುವ ರೀತಿ ನನ್ನನ್ನು ಈ ಅಂತಿಮ ಮನವಿ ಬರೆಯುವಂತೆ ಪ್ರೇರೇಪಿಸಿದೆ.
ನಿಮ್ಮ ಇಲಾಖಾ ಅಧಿಕಾರಿಗಳಾದ ಶ್ರೀ ಕೆಂಪ ತಿಮ್ಮಯ್ಯ, ಶ್ರೀ ಟಿ ಎಲ್ ನಾರಾಯಣಸ್ವಾಮಿ ಇವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ನಿಮಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಿದೆ. ಅನುದಾನಕ್ಕೆ ಒಳಪಡದ ನೌಕರರ ಬಗ್ಗೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವ ಬಗ್ಗೆ ದೂರು ಸಲ್ಲಿಸಿದ್ದಿದೆ. ಆದರೆ ಇದುವರೆವಿಗೂ ನೀವು ಯಾವ ಕ್ರಮ ತೆಗೆದುಕೊಂಡ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮ್ಮ ಇಲಾಖೆಯಿಂದಲೇ ನಿಮ್ಮ ಇಲಾಖಾ ಅಧಿಕಾರಿಗಳ ಬಗ್ಗೆ ಇಲಾಖಾ ಮುಖ್ಯಸ್ಥರಾದ ನೀವು ಮಾಹಿತಿ ಪಡೆಯಲು ೬ ತಿಂಗಳು ಬೇಕಾದರೆ ಇನ್ನು ಸಾಮಾನ್ಯ ನಾಗರಿಕನ ಪಾಡೇನು?
ಸರ್ಕಾರವು ತನ್ನ ಪತ್ರದಲ್ಲಿ ನನ್ನ ದೂರುಗಳನ್ನೂ ಲಗತ್ತಿಸಿ ಸಮಗ್ರ ವರದಿ ಸಲ್ಲಿಸುವಂತೆ ನಿಮಗೆ ೦೮/೧೧/೨೦೧೧ರಲ್ಲಿಯೇ ಸೂಚಿಸಿದ್ದರು ನೀವುಗಳು ಯಾವ ಕಾರಣದಿಂದ ವಿಳಂಬ ಧೋರಣೆ ಅನುಸರಿಸುತ್ತಿರುವಿರಿ ಎಂಬುದು ನನಗೆ ತಿಳಿಯುತ್ತಿಲ್ಲ.
ಮಾನ್ಯರೇ ದಯಮಾಡಿ ಅರ್ಥಮಾಡಿಕೊಳ್ಳಿ. ಸದರಿ ನೌಕರರ ಶಿಸ್ತು ಪ್ರಾಧಿಕಾರ ನೀವುಗಳು. ನಾನು ನಿಮ್ಮ ಅನುಮತಿ ಇಲ್ಲದೆ ಮೊಕದ್ದಮೆ ದಾಕಲಿಸಿದಲ್ಲಿ ಇಲಾಖಾ ಮುಖ್ಯಸ್ಥರನ್ನು ಸಹಾ ಆರೋಪಿಯನ್ನಾಗಿ ಮಾಡಬೇಕಾಗುತ್ತದೆ. ಕಾರಣ ಸದರಿ ನೌಕರರ ಮೇಲಾಧಿಕಾರಿಗಳು ತಾವೇ ಮತ್ತು ಅನುಮತಿಯನ್ನು ತಾವು ಇದುವರೆವಿಗೂ ನೀಡಿಲ್ಲ. ಆದರೆ ನಾನು ತಾನೇ ಎಷ್ಟು ದಿನಗಳವರೆಗೆ ಕಾಯಲು ಸಾಧ್ಯ? ತಾವೇ ಯೋಚಿಸಿ ನೋಡಿ.. ವಿಳಂಬ ಆದರೆ ಪ್ರಕರಣವು ಕಾಲವಿಲಂಬದ ಆಧಾರದ ಮೇಲೆ ವಜಾ ಆಗುವ ವಿಚಾರ ತಮಗೂ ಗೊತ್ತು.
Monday, February 27, 2012
ಕಾನೂನುಬಾಹಿರ ವ್ಯವಹಾರ: ಖಾಸಗಿ ಶಾಲೆಗಳಿಗೆ ಕಡಿವಾಣ-ಕಾಲೇಜುಗಳಿಗೂ ಅನ್ವಯ-ಪ್ರಜಾವಾಣಿ ವಾರ್ತೆ
ಡೊನೇಷನ್ ಹಾವಳಿ ಸೇರಿದಂತೆ ಖಾಸಗಿ ಶಾಲೆಗಳ `ಕಾನೂನು ಬಾಹಿರ ವ್ಯವಹಾರ`ಗಳಿಗೆ ಕಡಿವಾಣ ಹಾಕಲು ಈ ಮಸೂದೆ ರೂಪಿಸಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಇಂಥ ಮಸೂದೆ ಈಗಾಗಲೇ ಸಂಸತ್ತಿನ ಒಪ್ಪಿಗೆಗಾಗಿ ಕಾದು ಕುಳಿತಿದೆ.
`ಖಾಸಗಿ ಶಾಲೆಗಳ ಮಾನ್ಯತೆ ನಿಯಮಾವಳಿ` (ಬೈಲಾ) ಮೀರುವ ಶಾಲೆಗಳ ಆಡಳಿತ ಮಂಡಳಿಗಳ ಮೇಲೆ ಸಿವಿಲ್- ಕ್ರಿಮಿನಲ್ ಮೊಕದ್ದಮೆ ಹೂಡಲು ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಮಸೂದೆಯಲ್ಲಿ ಅವಕಾಶವಿದೆ. ತಪ್ಪಿತಸ್ಥ ಶಾಲೆಗಳಿಗೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ಹಾಕಲು ಇಲ್ಲವೆ, ಆಡಳಿತ ಮಂಡಳಿ ಮುಖ್ಯಸ್ಥರನ್ನು 1 ತಿಂಗಳಿಂದ ಗರಿಷ್ಠ 3 ವರ್ಷಗಳವರೆಗೆ ಜೈಲಿಗೆ ಕಳುಹಿಸುವ ಅಧಿಕಾರವೂ ಇರುತ್ತದೆ.
ಈ ನಿಗದಿತ ಚೌಕಟ್ಟಿನೊಳಗೆ ಹೊಸ ಮಸೂದೆ ರೂಪಿಸಲು ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಸಚಿವೆ ಪುರಂದರೇಶ್ವರಿ ನೇತೃತ್ವದಲ್ಲಿ 22ಸದಸ್ಯರ ಸಮಿತಿ ರಚಿಸಲಾಗಿದೆ. ಕೆಲ ರಾಜ್ಯಗಳ ಶಿಕ್ಷಣ ಸಚಿವರು ಮತ್ತು ಶಿಕ್ಷಣ ತಜ್ಞರು ಸದಸ್ಯರಾಗಿರುವ ಈ ಸಮಿತಿಯ ಮೊದಲ ಸಭೆ ಈಚೆಗೆ ನಡೆಯಿತು. ಡೊನೇಷನ್ ಹೆಸರಿನಲ್ಲಿ ಪೋಷಕರ `ಸುಲಿಗೆ` ನಡೆಯುತ್ತಿದೆ. `ಪ್ರಾಸ್ಪೆಕ್ಟಸ್`ಗಳನ್ನು ಹೆಚ್ಚಿನ ಬೆಲೆಗೆ ಮಾರಲಾಗುತ್ತಿದೆ.
ಅಗತ್ಯಕ್ಕಿಂತ ಹೆಚ್ಚು ಶುಲ್ಕ ವಸೂಲು ಮಾಡಲಾಗುತ್ತಿದೆ. ಪುಸ್ತಕ ಮತ್ತು ಸಮವಸ್ತ್ರಗಳನ್ನು ಶಾಲೆಯಲ್ಲೇ ಖರೀದಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂಬ ದೂರುಗಳು ಮೇಲಿಂದ ಮೇಲೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ಉದ್ದೇಶಿಸಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಮೂಲಗಳು `ಪ್ರಜಾವಾಣಿ`ಗೆ ತಿಳಿಸಿವೆ.
ಪ್ರವೇಶ ಪಾರದರ್ಶಕವಾಗಿರಬೇಕು. ಒಟ್ಟು ಸೀಟುಗಳ ಪ್ರಮಾಣ, ಪ್ರವೇಶ ವಿಧಾನ, ಸ್ಥಳೀಯರಿಗೆ ಎಷ್ಟು ಸೀಟು ಕೊಡಲಾಗಿದೆ ಇತ್ಯಾದಿ ಮಾಹಿತಿ ಬಹಿರಂಗಪಡಿಸಬೇಕು ಎಂಬ ನಿಯಮಗಳಿದ್ದರೂ ಶಾಲಾ ಆಡಳಿತ ಮಂಡಳಿಗಳು ಪಾಲಿಸುತ್ತಿಲ್ಲ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ವರ್ಗಾವಣೆ ಪಡೆದ ಸಂದರ್ಭದಲ್ಲಿ ವಿದ್ಯಾರ್ಥಿಯಿಂದ ಪಡೆದ ಶುಲ್ಕ ಹಿಂತಿರುಗಿಸುತ್ತಿಲ್ಲ.
ವಿದ್ಯಾರ್ಥಿಗಳನ್ನು ಆಕರ್ಷಿಸಲು ಸುಳ್ಳು ಜಾಹಿರಾತು ನೀಡಲಾಗುತ್ತಿದೆ. ಮೈದಾನ, ಕ್ರೀಡಾ ಸಾಮಗ್ರಿ, ಗ್ರಂಥಾಲಯ ಇಲ್ಲದಿದ್ದರೂ ಹಣ ಕೀಳಲಾಗುತ್ತಿದೆ. ಕಟ್ಟಡ ನಿಧಿ ವಸೂಲು ಮಾಡಲಾಗುತ್ತಿದೆ. ಈ ರೀತಿಯ ಕಾನೂನುಬಾಹಿರ ವ್ಯವಹಾರಗಳಿಗೆ ವಿರಾಮ ಹಾಕಬೇಕಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ದೇಶದಲ್ಲಿ ಸುಮಾರು 18 ಲಕ್ಷ ಶಾಲೆಗಳಿವೆ. ಇದರಲ್ಲಿ ಶೇ. 37ರಷ್ಟು ಖಾಸಗಿ ಶಾಲೆಗಳು. ಸಿಬಿಎಸ್‌ಇ ಮಾನ್ಯತೆ ಪಡೆಯುವ ಸಮಯದಲ್ಲಿ ಶಾಲಾ ಆಡಳಿತ ಮಂಡಳಿಗಳು ನೀತಿ- ನಿಯಮ ಹಾಗೂ ಷರತ್ತು ಪಾಲಿಸುವುದಾಗಿ `ಮುಚ್ಚಳಿಕೆ` ಬರೆದುಕೊಡುತ್ತವೆ. ಅದನ್ನು ಪಾಲಿಸುವುದಿಲ್ಲ. ಕಾನೂನು ಉಲ್ಲಂಘಿಸುವ ಶಾಲೆಗಳಿಗೆ ದಂಡ ಹಾಕಲು ಈಗಿರುವ ಕಾನೂನಿನಲ್ಲೂ ಅವಕಾಶವಿದೆ.
ಮಾನ್ಯತೆಯನ್ನೂ ರದ್ದುಪಡಿಸಬಹುದು. ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂಬ ಕಾರಣದಿಂದ ಇಂಥ ಕಠಿಣ ಕ್ರಮಗಳಿಗೆ ಮುಂದಾಗುತ್ತಿಲ್ಲ. ಈ ಮೃದು ಧೋರಣೆಯನ್ನು ಶಾಲೆಗಳು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಮೂಲಗಳು ಆರೋಪಿಸಿವೆ.
ಶಾಲೆಗಳು ಡೊನೇಷನ್ ಕೇಳಿದರೆ ಅಥವಾ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ವಿದ್ಯಾರ್ಥಿ ಪೋಷಕರು ಲಿಖಿತ ದೂರು ಸಲ್ಲಿಸಬಹುದು. ಮೂಲಸೌಲಭ್ಯಗಳ ಕೊರತೆ ಮತ್ತಿತರ ವೇಳೆ ಶಿಕ್ಷಣ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಅಧಿಕಾರಿಗಳೂ ಒಳಗೊಂಡಂತೆ ಯಾರೂ ಬೇಕಾದರೂ ದೂರು ಕೊಡಬಹುದು.
ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ಮೊದಲ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ದೂರಿನ ವಿಚಾರಣೆ ನಡೆಸಲಿವೆ. ಅಷ್ಟೇ ಅಲ್ಲದೆ, `ಶಿಕ್ಷಣ ನ್ಯಾಯಮಂಡಳಿ` ಸ್ಥಾಪನೆಗೂ ಮಸೂದೆಯಲ್ಲಿ ಅವಕಾಶ ಇರುತ್ತದೆ.
prajavani Front Page 27.02.2012
Thursday, February 23, 2012
ಪ್ರಜಾವಾಣಿ ವಾರ್ತೆ-ಎಂಜಿನಿಯರಿಂಗ್ `ಸಾಮಾನ್ಯ ಪ್ರವೇಶ ಪರೀಕ್ಷೆ` (ಸಿಇಟಿ) ಮುಂದಿನ ಶೈಕ್ಷಣಿಕ ವರ್ಷದಿಂದ (2013) ಜಾರಿಗೆ ಬರುವ ಕುರಿತು ಅನಿಶ್ಚತತೆ
ಆದರೆ, ಕೇಂದ್ರ ಸರ್ಕಾರದ ಅಧೀನದ ಕಾಲೇಜುಗಳಲ್ಲಿ ಹೊಸ ವ್ಯವಸ್ಥೆ ಮುಂದಿನ ವರ್ಷದಿಂದಲೇ ಜಾರಿಗೆ ಬರಲಿದೆ.
ಏಕರೂಪ ಸಿಇಟಿ ಆರಂಭ ಕುರಿತು ರಾಜ್ಯಗಳ ಜತೆ ಸಮಗ್ರವಾಗಿ ಸಮಾಲೋಚಿಸಬೇಕೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ 2014ರ ಶೈಕ್ಷಣಿಕ ವರ್ಷದಲ್ಲೂ ಇದು ಜಾರಿಯಾಗುವ ಕುರಿತು ಅನುಮಾನ ತಲೆದೋರಿದೆ. ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಸಮ್ಮುಖದಲ್ಲಿ ಬುಧವಾರ ನಡೆದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಏಕರೂಪ ಸಿಇಟಿ ಕುರಿತು ಸಮಗ್ರವಾಗಿ ಚರ್ಚೆ ನಡೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಮಾನವ ಸಂಪನ್ಮೂಲ ಸಚಿವಾಲಯ ತನ್ನ ವ್ಯಾಪ್ತಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಮುಂದಿನ ವರ್ಷದಿಂದ ಏಕರೂಪ ಸಿಇಟಿ ಜಾರಿಗೆ ಕಟಿಬದ್ಧವಾಗಿದೆ. ಇದರಿಂದ ದೇಶದ 15 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), 30 ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ಮಾಲಜಿ (ಎನ್‌ಐಟಿ), 4 ಮಾಹಿತಿ ತಂತ್ರಜ್ಞಾನ ಕಾಲೇಜ್ (ಐಐಐಟಿ), ಐದು ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್‌ಇಆರ್) ಹಾಗೂ ಡೀಮ್ಡ ಕಾಲೇಜುಗಳಿಗೆ ಸಾಮಾನ್ಯ ಪರೀಕ್ಷೆ ಪದ್ದತಿ ಅನ್ವಯವಾಗಲಿದೆ.
ಶಿಕ್ಷಣ ಸಚಿವರ ಸಭೆಯಲ್ಲಿ ಸಮಗ್ರವಾಗಿ ಚರ್ಚೆಸಿದ ಬಳಿಕ 2013ರಿಂದ ಏಕರೂಪ ಸಿಇಟಿ ಜಾರಿಗೆ ತಾತ್ವಿಕ ಒಪ್ಪಿಗೆ ಕೊಡಲಾಯಿತು. ಆದರೆ, ಸಾಮಾನ್ಯ ಪ್ರವೇಶ ಪರೀಕ್ಷೆ ಜತೆಗೆ ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಗೂ ಕೃಪಾಂಕ ನೀಡಲು ಮಾನವ ಸಂಪನ್ಮೂಲ ಸಚಿವಾಲಯ ಸಮ್ಮತಿಸಿದ ಬಳಿಕ ಈ ಏಕರೂಪ ಪರೀಕ್ಷೆ ಪದ್ಧತಿ ಜಾರಿಗೆ ಸಮ್ಮತಿಸಲಾಯಿತು. 2013ರಲ್ಲಿ ಸಿಇಟಿ ಎರಡು ಸಲ ಅಂದರೆ ಏಪ್ರಿಲ್- ಮೇ ಹಾಗೂ ನವೆಂಬರ್- ಡಿಸೆಂಬರ್‌ನಲ್ಲಿ ನಡೆಯಲಿದ್ದು ಫಲಿತಾಂಶ ಎರಡು ವರ್ಷಗಳ ಅವಧಿಗೆ ಮಾನ್ಯತೆ ಹೊಂದಿರುತ್ತದೆ. ಅನಂತರ ಇದನ್ನು ವರ್ಷಕ್ಕೆ ಮೂರು, ನಾಲ್ಕು ಸಲ ನಡೆಸಲಿದ್ದು ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದರು.
ಏಕರೂಪ ಸಿಇಟಿ ಕೇಂದ್ರ ಮತ್ತು ರಾಜ್ಯ ಅನುಸರಿಸುತ್ತಿರುವ ಮೀಸಲು ನೀತಿಗೆ ಯಾವುದೇ ರೀತಿಯಲ್ಲೂ ಅಡ್ಡಿ ಮಾಡದು ಎಂದು ಸ್ಪಷ್ಟಪಡಿಸಿದರು.
ರಾಜ್ಯ ಮಟ್ಟದ ಎಂಜಿನಿಯರಿಂಗ್ ಪ್ರವೇಶಕ್ಕೆ ರಾಜ್ಯಗಳು ತಮ್ಮ ಶಿಕ್ಷಣ ಮಂಡಳಿ ಪರೀಕ್ಷೆ ಜತೆಗೆ ತಮಗೆ ಅಗತ್ಯ ಕಂಡಷ್ಟು ಕೃಪಾಂಕ ನೀಡಬಹುದು. ಆದರೆ, ಕನಿಷ್ಠ ಶೇ. 40 ಕೃಪಾಂಕ ಕಡ್ಡಾಯ. ತಮಿಳುನಾಡಿನಂತೆ ಶೇ. 100 ಕೃಪಾಂಕ ಬೇಕಾದರೂ ನೀಡಬಹುದು. ಇದರಿಂದ ಉದ್ದೇಶಿತ ವ್ಯವಸ್ಥೆಗೆ ತೊಂದರೆ ಆಗದು ಎಂದರು.
Read the thread here
Wednesday, February 22, 2012
ಆಯುಕ್ತರು ನನ್ನ ಪತ್ರಗಳ ಮೇಲೆ ಕ್ರಮ ತೆಗೆದುಕೊಳ್ಳಲು ಆರು ತಿಂಗಳು ಬೇಕೇ?
ನಾನು ತಮ್ಮ ಇಲಾಕೆಯಲ್ಲಿ ಸಲ್ಲಿಸಿದ ದೂರುಗಳ ಮೇಲೆ ಕ್ರಮ ತೆಗೆದುಕೊಂಡು ನನಗೆ ಹಿಂಬರಹ ನೀಡಲು ತಮಗೆ ಸುಮಾರು ಆರು ತಿಂಗಳುಗಳ ಕಾಲಾವಕಾಶ ನೀಡಿದ್ದರು ಇದುವರೆವಿಗೂ ನನ್ನ ದೂರಿನ ಮೇಲೆ ಯಾವ ಕ್ರಮ ತೆಗೆದುಕೊಂಡಿರುವಿರಿ ಎಂಬ ಬಗ್ಗೆ ಕನಿಷ್ಠ ಒಂದು ಹಿಂಬರಹವನ್ನಾದರು ನೀದಿಲ್ಲದಿರುವ ಇಲಾಖೆಯ ಕಾರ್ಯವೈಖರಿ ಆಕ್ಷೇಪಾರ್ಹ.
೧. ಶ್ರೀ ಕೆಂಪತಿಮ್ಮಯ್ಯ -ಇವರ ಮೇಲೆ ಮೊಕದ್ದಮೆ ದಾಕಲಿಸುವ ಕುರಿತು
೨. ಶ್ರೀ, ಟಿ ಎಲ್ ನಾರಾಯಣಸ್ವಾಮಿ ಇವರ ಮೇಲೆ ನ್ಯಾಯಾಂಗ ನಿಂದನಾ ಪ್ರಕರಣ ಹೂಡುವ ಬಗ್ಗೆ
೩. ಸರ್ವೋದಯ ಕಾಲೇಜು, ತುಮಕೂರು ಈ ಕಾಲೇಜಿನ ಕಡತಗಳು ಕಾಣೆಯಾಗಿರುವ ಬಗ್ಗೆ
೪. ಉದಯಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅನುದಾನಕ್ಕೆ ಒಳಪಡದೇ ಸುಮಾರು ೨೫ ವರ್ಷಗಳಿಂದ ಇಲಾಖೆಯಿಂದ ವೇತನಾನುದಾನ ಪಡೆಯುತ್ತಿರುವ ಬಗ್ಗೆ
ದಾಕಲೆಗಳ ಸಮೇತ ನಿಮಗೆ ದೂರು ಸಲ್ಲಿಸಲಾಗಿದ್ದರು ಇದುವರೆವಿಗೂ ನಿಮ್ಮಿಂದ ಈ ಬಗ್ಗೆ ಯಾವುದೇ ಮಾಹಿತಿ ಬರದಿರುವುದು ವಿಶಾದನಿಯ. ಹೀಗಾದಲ್ಲಿ ಸಾರ್ವಜನಿಕರು ಇಲಾಕೆಯ ಮೇಲೆ ಹೇಗೆ ತಾನೇ ನಂಬಿಕೆ ಇಡಲು ಸಾಧ್ಯ ?
ಈಗಾಗಲೇ ನನ್ನ ಹಿಂದಿನ ಮೇಲ್ ಒಂದರಲ್ಲಿ ಪ್ರಕರಣ ದಾಕಲಿಸುವುದಾಗಿ ತಿಳಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಕಲಿಸಲು ಈ ಮೇಲ್ ತಲುಪಿದ ಒಂದು ವಾರದೊಳಗೆ ತಮ್ಮ ಕಚೇರಿಯಿಂದ ಅನುಮತಿ/ಹಿಂಬರಹ ಬರದಿದ್ದಲ್ಲಿ ಉದ್ದೇಶಪೂರ್ವಕವಾಗಿ ಬ್ರಷ್ಟ ಅಧಿಕಾರಿಯನ್ನು ರಕ್ಷಿಸಲು ಇಲಾಕಾ ಹಿರಿಯ ಅಧಿಕಾರಿಗಳು ಯತ್ನಿಸುತ್ತಿದ್ದಾರೆಂದು ಭಾವಿಸಿ ತಮ್ಮ ಅನುಮತಿಗಾಗಿ ಕಾಯದೆ ಪ್ರಕರಣ ದಾಖಲಿಸುತ್ತೆನೆಂಬ ವಿಚಾರವನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಘನ ನ್ಯಾಯಾಲಯದ ಮುಂದೆ ತಮಗೆ ಈ ಹಿಂದೆ ಕಳುಹಿಸಿರುವ ಈ ಮೇಲ್ ಗಳನ್ನೂ ದಾಕಲೆಗಳಾಗಿ ಹಾಜರುಪಡಿಸಲಾಗುವುದು. ಈ ವಿಚಾರ ಅತಿ ಪ್ರಮುಖವಾದುದೆಂದು ಪರಿಗಣಿಸಿ ಆದ್ಯತೆಯ ಮೇರೆಗೆ ಕ್ರಮ ತೆಗೆದುಕೊಳ್ಳಲು ಕೋರಿದೆ.
Monday, February 13, 2012
ಖಾಲಿಯಾದ ಒಂದು ಹುದ್ದೆಗೆ ಮೂರೂ ಜನರ ನೇಮಕಾತಿ ಅನುಮೋದನೆ: ಬಂಪರ್ ಸ್ಕೀಮ್-ಸರ್ಕಾರಕ್ಕೆ ಸುಮಾರು ಹದಿನೈದು ವರ್ಷಗಳಿಂದ ಪಂಗನಾಮ !!!



ಮಾನ್ಯ ಆಯುಕ್ತರೇ,
ಸರ್ವೋದಯ ಪದವಿ ಪೂರ್ವ ಕಾಲೇಜು, ತುಮಕೂರು ಇದು ಸರ್ಕಾರಕ್ಕೆ ವಂಚಿಸಿ ಮಂಜೂರಾದ ಕೇವಲ ಒಂದು ಅನುದಾನಿತ ಹುದ್ದೆಗೆ ವರ್ಷಗಳ ಅಂತರದಲ್ಲಿ ಮೂರೂ ಜನರನ್ನು ನೇಮಿಸಿ, ಇಲಾಖೆಯಿಂದ ಅನುದಾನವನ್ನು ಪಡೆಯುತ್ತಿರುವ ವಿಚಾರವು ದಿನಾಂಕ ೨೫.೧೧.೨೦೧೧ ರಂದು ನಿಮಗೆ ತಿಳಿಸಿದ್ದೆನು. ಅದಕ್ಕೆ ಪ್ರತಿಯಾಗಿ ದಾಕಲೆಗಳನ್ನು ಕೊಡಲು ತಾವು ತಿಳಿಸಿದ್ರಿ. ನಾನು ಇ ವಿಚಾರವಾಗಿ ದಾಖಲೆಗಳ ಸಮೇತ ದಿನಾಂಕ ೨೩.೧೦.೨೦೦೯ರದು ಕೊಟ್ಟ ದೂರು ಮತ್ತು ಅದರ ಕಡತ ಕೆಳೆದುಹೋಗಿದೆ ಅಂತಾ ನಿಮ್ಮ ಇಲಾಖೆಯಿಂದ ಬೇಜವಾಬ್ದಾರಿ ನಿರ್ಲಕ್ಷ್ಯತೆಯ ಉತ್ತರ ಬಂದ ಬಗ್ಗೆ ಮತ್ತು ಆ ಉತ್ತರದ ಪ್ರತಿಯನ್ನು ತಮಗೆ ಕಳುಹಿಸಿದ್ದೆನು.
ಶ್ರೀ ಜಿ ಸೀತಾರಾಂ ಎಂಬ ವ್ಯಕ್ತಿ ಸರ್ವೋದಯ ಪದವಿ ಪೂರ್ವ ಕಾಲೇಜು, ತುಮಕೂರು ಫಿಜಿಕ್ಸ್ ಉಪನ್ಯಾಸಕನ ಹುದ್ದೆ ಹಾಗು ಪ್ರಾಚಾರ್ಯನ ಹುದ್ದೆ ಖಾಲಿ ಆಗಬೇಕು. ಕಾರಣ ಆತ ಈ ಎರಡೂ ಹುದ್ದೆ ಅಲಂಕರಿಸಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ.
೧೯೯೩ರಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕಮಲಾಕ್ಷಿ ಇಲಾಕೆಯಿಂದ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಪಿಜಿಕ್ಸ್ ಉಪನ್ಯಾಸಕನ ಹುದ್ದೆ ತೆರವಾದರೆ ಕೆಮಿಸ್ಟ್ರಿ ಉಪನ್ಯಾಸಕರನ್ನು ತುಂಬಿಕೊಳ್ಳಲು ಯಾವ ನಿಯಮ ತಿಳಿಸುತ್ತದೆಯೋ ಕಾಣೆ. ಒಂದು ವೇಳೆ ನಿಯಮ ಹಾಗೆ ಇದ್ದರು ಕಥೆ ಅಲ್ಲಿಗೇ ಮುಗಿಯಲಿಲ್ಲ.
೧೯೯೫ರಲ್ಲಿ ಶ್ರೀ ರಂಗನಾಥ್ ಎನ್ನುವ ವ್ಯಕ್ತಿ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಅಲ್ಲಿಗೇ ಸೀತಾರಾಂ ನಿವೃತ್ತಿಯಿಂದ ತೆರವಾದ ಹುದ್ದೆಗೆ ಎರಡನೇ ಅನುಮೋದನೆ/ವೇತನ ಬಿಡುಗಡೆ ಆಯ್ತು.
೧೯೯ರಲ್ಲಿ ಶ್ರೀ ಬಸಪ್ಪ ಎನ್ನುವ ವ್ಯಕ್ತಿ ಸೀತಾರಾಂ ನಿವೃತ್ತಿ ಹೊಂದಿದ ಹುದ್ದೆಗೆ (?) ಅನುಮೋದನೆಗೆ ಒಳಪಡುತ್ತಾರೆ. ಅಲ್ಲಿಗೇ ಸೀತಾರಾಂ ನಿವೃತ್ತಿಯಿಂದ ತೆರವಾದ ಹುದ್ದೆಗೆ ಮೂರನೇ ಅನುಮೋದನೆ/ವೇತನ ಬಿಡುಗಡೆ ಮಾಡುತ್ತದೆ ಇಲಾಕೆ. ಖಾಲಿ ಇದ್ದದ್ದು ಒಂದು ಹುದ್ದೆ.
ಈ ಮೋಸ ತಿಳಿದ ಶ್ರೀ ರಂಗನಾಥ್ ಮತ್ತು ಶ್ರೀ ಬಸಪ್ಪ ರಾಜಿನಾಮೆ ನೀಡಿ ಹೊರನಡೆಯುತ್ತಾರೆ. ಆದರೆ ಮತ್ತೆ ಅವರ ರಾಜಿನಾಮೆಯಿಂದ ತೆರವಾದ ಹುದ್ದೆಗಳಿಗೆ ನೇಮಕಾತಿ ಅನುಮೋದನೆ ಮಾಡಿ ವೇತನ ಬಿಡುಗಡೆ ಮಾಡುತ್ತಿದೆ ಇಲಾಕೆ. ಅಂದರೆ ಕೇವಲ ಒಂದು ಹುದ್ದೆ ಇಲಾಖೆ/ಸರ್ಕಾರದಿಂದ ಮಂಜುರಾದರೆ ಸಾಕು, ಮೂರೂ ಜನ ಸಂಬಳ ಪಡೆಯಲು ಸ್ಕೆಚ್ ಹಾಕಬಹುದು ಮತ್ತು ಕಾರ್ಯಗತಗೊಳಿಸಲು ಬಹುದು.
ಈ ತರಹದ ಇನ್ನೆಷ್ಟು ಅನುಮೋದನೆಗನೂ ಇಲಾಕೆ ಮಾಡಿದೆಯೋ ದೇವರಿಗೆ ಗೊತ್ತು. ಮಾನ್ಯ ಆಯುಕ್ತರು ಪದವಿ ಪೂರ್ವ ಶಿಕ್ಷಣ ಇಲಾಕೆಯ ಕಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಸರ್ಕಾರದಿಂದ/ಆರ್ಥಿಕ ಇಲಾಖೆಯಿಂದ ಮಂಜುರಾಗಿರುವ ಒಟ್ಟು ಹುದ್ದೆಗಳು ಹಾಗು ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಬಗ್ಗೆ ಏಕೆ ಮಾಹಿತಿ ಪಡೆದು ಕ್ರಮ ಜರುಗಿಸಬಾರದು?
ಇಲಾಖೆಯ ಕಡತದಲ್ಲಿಯೇ ಇದ್ದ ತ್ಯಾಬುಳರ್ ಮಾದರಿಯ ಮಾಹಿತಿಯನ್ನು ಇಲಾಕೆಯ ಆಯುಕ್ತರಿಗೆ ಹೊರಗಿನ ವ್ಯಕ್ತಿಯೊಬ್ಬ ಈ ತರಹ ಮೇಲ್ ಮೂಲಕ (ದೂರಿನ ಕಡತ ಕಳೆದಿರುವುದರಿಂದ?) ಕಳಿಸುತ್ತಿರುವುದು ವಿಪರ್ಯಾಸವೇ ಸರಿ. ಆ ಪ್ರತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಮಾಣಿಸಿ ನೋಡಿದರೆ ಸತ್ಯ ತಿಳಿಯುತ್ತದೆ ಎಂಬ ನಂಬಿಕೆಯಿಂದ ....ಪ್ರಕಟಿಸಲಾಗಿದೆ.
ವಂದನೆಗಳು
Sunday, February 12, 2012
ಕೆಂಪ ತಿಮ್ಮಯ್ಯನಿಂದ ಮತ್ತೊಂದು ದುರ್ನಡತೆ: ಆಯುಕ್ತರಿಗೆ ಚಳ್ಳೆ ಹಣ್ಣು ತಿನ್ನಿಸಿದ ಧೀರ: ಉಪನ್ಯಾಸಕನಿಗೆ ಸೇವಾ ವಿಚ್ಸಿನ್ನತೆ ತಂದಿಟ್ಟ ಬ್ರಷ್ಟ





ಶ್ರೀ ಸಿದ್ದಪ್ಪ, ಆಂಗ್ಲಭಾಷಾ ಉಪನ್ಯಾಸಕರ ವರ್ಗಾವಣೆಯ ನಂತರ ಕೆಲಸಕ್ಕೆ ಹಾಜರು ಪಡಿಸಿಕೊಳ್ಳದ ಬಗ್ಗೆ ನಿಮ್ಮ ಇಲಾಕೆಯ ಕಡತ ಸಂಕ್ಯೆ ಯುಯು ೪೪/೬೦/೨೦೦೭-೦೮ರಲ್ಲಿ ಮಾಹಿತಿ ಇದೆ.
ನಿಮ್ಮ ಕಚೇರಿ ಯಿಂದಲೇ ವರ್ಗಾವಣೆ ಆದೇಶ ಇದ್ದರು ಆತನನ್ನು ವರ್ಗಾಯಿಸಲ್ಪಟ್ಟ ಕಾಲೇಜಿನವರು ಕೆಲಸಕ್ಕೆ ಹಾಜರು ಪಡಿಸಿ ಕೊಳ್ಳಲಿಲ್ಲ. ಕೆಲಸದಿಂದ ರಿಲಿವ್ ಮಾಡಿದ ಕಾಲೇಜು ಸಹಾ ಮತ್ತೆ ಕೆಲಸಕ್ಕೆ ಹಾಜರು ಪಡಿಸಿಕೊಳ್ಳಲು ತಮ್ಮ ಇಲಾಕೆಯ್ ಆದೇಶ ಕೇಳಿತು. ಕಾರಣ ಶ್ರೀ ಸಿದ್ದಪ್ಪ ಇಲಾಕೆಗೆ, ಸರ್ಕಾರಕ್ಕೆ, ಕಾಲೇಜಿನ ಪ್ರಾಂಶುಪಾಲರಿಗೆ, ಆಡಳಿತ ಮಂಡಳಿಗೆ ಹಾಗು ಜಿಲ್ಲಾ ಉಪನಿರ್ದೆಶಕರಿಗೂ ಮನವಿ ಸಲ್ಲಿಸುತ್ತಾ ಬಂದರೂ ಸುಮಾರು ಐದು ತಿಂಗಳು ಆತನಿಗೆ ವೇತನವನ್ನಾಗಲಿ, ಸೇವೆಯನ್ನಾಗಲಿ ನೀಡಲಿಲ್ಲ.
ಅದನ್ನು ಕೋರಿ ಶ್ರೀ ಸಿದ್ದಪ್ಪ ಇಲಾಕೆಗೆ ಮನವಿ ಸಲ್ಲಿಸಲಾಗಿ ಕಡತದಲ್ಲಿ ತಪ್ಪು ತಪ್ಪು ಮಾಹಿತಿ ಮಂಡಿಸಿ ಇಲಾಕಾ ನಿರ್ದೇಶಕರನ್ನು ತಪ್ಪು ದಾರಿಗೆ ಎಳೆದು, ನನ್ನ ಕಕ್ಷಿದಾರ ಶ್ರೀ ಸಿದ್ದಪ್ಪನವರಿಗೆ ಅನ್ಯಾಯ ಎಸಗಿರುತ್ತಾರೆ. ನಾನು ಇ ಹಿಂದೆ ತಮಗೆ ತಿಳಿಸಿದಂತೆ ಇ ಬ್ರಷ್ಟ ಅಧಿಕಾರಿಯ ಒಂದೊಂದೇ ಹಗರಣಗಳು ಬೆಳಕಿಗೆ ಬರುತ್ತಿವೆ. ಈತ ಕೈ ಇಡುವ ಎಲ್ಲಾ ಕಡತಗಳು ವಿರುಪಗೊಳಿಸಲ್ಪದುತ್ತವೆ. ವರದಿಯನ್ನೇ ಬದಲಿಸುವುದರಲ್ಲಿ ಈತ ಎತ್ತಿದ ಕೈ. ಇಲ್ಲಿ ಆತ ಎಸಗಿರುವ ತಪ್ಪಿನಿಂದಾಗಿ ಶ್ರೀ ಸಿದ್ದಪ್ಪ ಎಂಬ ಉಪನ್ಯಾಸಕನ ಸೇವೆಯಲ್ಲಿ ವಿಚ್ಸಿನ್ನತೆ ಉಂಟಾಗಿದೆ.
ಇಂತಹಾ ಲಜ್ಜೆಗೇಡಿ ಸಿಬ್ಬಂದಿಯಿಂದಾಗಿ ನೊಂದ ವ್ಯಕ್ತಿಗಳು ನ್ಯಾಯಾಲಯಕ್ಕೆ ಮೊರೆ ಹೋದರೆ ನಿರ್ದೇಶನಾಲಯದ ಮಾನ ಹರಾಜಾಗುತ್ತದೆ. ಖುದ್ದಾಗಿ ಆಯುಕ್ತರೇ ಎರಡು ಸಾರಿ ನಿಯಮಗಳನ್ನು, ಸರ್ಕಾರದ ಪತ್ರಗಳನ್ನು ಮಂಡಿಸಲು ಹೇಳಿದರೂ ಆಯುಕ್ತರನ್ನೇ ದಿಕ್ಕು ತಪ್ಪಿಸಿ ಕಡತದಲ್ಲಿ ತಪ್ಪು ಮಂಡಿಸಿದ ಶ್ರೀ ಕೆಂಪತಿಮ್ಮಯ್ಯನ ವಿರುದ್ಧ ಕ್ರಮ ತೆಗೆದುಕೊಳ್ಳಲು ತಮ್ಮನ್ನು ಕೋರುತ್ತೇನೆ.
ಆತ ಮಾಡಿದ ತಪ್ಪು ಹಾಗು ಇಲಾಕೆಯಲ್ಲಿರುವ ದಾಕಲೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
Tuesday, February 07, 2012
ಕೆಂಪತಿಮ್ಮಯ್ಯ ದೂರು ಇದ್ದರೂ ಪಿಂಚಣಿಗೆ ಶಿಫಾರಸ್ಸು ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದನ್ನು ತೋರಿಸುವ ದಾಖಲೆ
ತುಮಕೂರು ಉಪನಿರ್ದೇಶಕರ ಕಚೇರಿಯಲ್ಲಿ ದಾಕಲೆಗಳ ಕೊಠಡಿ ಇಲ್ಲ-ಉಪನಿರ್ದೇಶಕ ರಿಂದ ನಿರ್ದೇಶಕರಿಗೆ ಪತ್ರ-ಬದಲಾಗದ ಚಿತ್ರ

ನಿರ್ದೇಶಕರು ಈಗ ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ನಂಬಿರುವೆ........
ಈ ಬಗ್ಗೆ ಉಪನಿರ್ದೇಶಕರು (ಅಂದಿನ ಪರಭಾರೆ-ಶ್ರೀ ರಂಗನಾಥ್ ಅಲ್ಲ. ಅವರಿಗೆ ಇದನ್ನು ತಿಳಿಸಲು ಪುರಸೊತ್ತಿಲ್ಲ) ನಿರ್ದೇಶಕರಿಗೆ ಬರೆದ ಪತ್ರದ ಪ್ರತಿ ಇಲ್ಲಿ ಪ್ರಕಟಿಸಲಾಗಿದೆ.
Sunday, February 05, 2012
ಪದವಿ ಪೂರ್ವ ಶಿಕ್ಷಣ ಇಲಾಕೆಯಲ್ಲಿ ಕಡತ ತಿದ್ದುವಿಕೆ ನಿರ್ವಹಣೆ ಬಗ್ಗೆ ಕಾನೂನು ಇಲಾಕೆಯ ಸ್ಪಷ್ಟ ಅಭಿಪ್ರಾಯ: ಈಗಿನ ದಕ್ಷ ನಿರ್ದೇಶಕರಿಂದ ಬದಲಾವಣೆಯ ಗಾಳಿಯ ನಿರೀಕ್ಷೆ


ಹೀಗಾದರು ಇಲಾಕೆಯಲ್ಲಿ ಬದಲಾವಣೆ ಆಗಲಿಲ್ಲ. ಈಗ ಬದಲಾವಣೆಯ ಸುವರ್ಣ ಯುಗ. ಅದು ನಿಮ್ಮ ಅಧಿಕಾರಾವಧಿಯಲ್ಲಿ...ಅದಕ್ಕೆ ಈ ಬ್ಲಾಗ್ ಬರಹ. ಸರ್ಕಾರದ ಪತ್ರಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ದಯಮಾಡಿ ಪರಿಶೀಲಿಸಿ....ಇಲಾಕೆಯಲ್ಲಿ ಬದಲಾವಣೆ ತನ್ನಿ ಎಂದು ನನ್ನ ಮನವಿ
ಇಲಾಕೆ ಮಾಡುತ್ತಿರುವ ಮಹತ್ತರವಾದ ತಪ್ಪು: ಸಾವಿರಾರು ನವ್ಕರರ ಜೀವನಕ್ಕೆ ಕುತ್ತು-ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಪ್ರಾಧಿಕಾರ ಆಡಳಿತ ಮಂಡಳಿಗಳಲ್ಲ !!!

ಖಾಸಗಿ ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರ ಯಾರು ಎಂಬ ಪ್ರಶ್ನೆಗೆ ಇಲಾಕೆಯಲ್ಲಿ ರೆಡಿ ಮೇಡ್ ಉತ್ತರ ಯಾವಾಗಲು ಆಡಳಿತ ಮಂಡಲಿ ಎಂದೇ ಇರುತ್ತದೆ. ಆದರೆ ಅದು ತಪ್ಪು ಎಂದು ತೋರಿಸುವ ಒಂದು ಚಿಕ್ಕ ಪ್ರಯತ್ನವೇ ಈ ಬ್ಲಾಗ್ ಬರಹ.
ಖಾಸಗಿ ಅನುದಾನಿತ/ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಸಿಬ್ಬಂದಿಗಳ ಶಿಸ್ತು ಪ್ರಾಧಿಕಾರ ಆಡಳಿತ ಮಂಡಲಿ ಅಲ್ಲ, ವ್ಯವಸ್ಥಾಪಕ ಸಮಿತಿ ....
ಕರ್ನಾಟಕ ಶಿಕ್ಷಣ ಕಾಯ್ದೆ ೧೯೮೩ರ ಕಲಮು 46 ಹೇಳುವಂತೆ
46. ªÀåªÀ¸ÁÜ¥ÀPÀ ¸À«ÄwAiÀÄ C¢üPÁgÀUÀ¼ÀÄ ªÀÄvÀÄÛ ¥ÀæPÁAiÀÄðUÀ¼ÀÄ.- (1) F C¢ü¤AiÀĪÀÄzÀ CxÀªÁ CzÀgÀ ªÉÄÃgÉUÉ ¤AiÀīĸÀ¯ÁzÀ ¤AiÀĪÀÄUÀ¼À G¥À§AzsÀUÀ½UÉÆ¼À¥ÀlÄÖ, ªÀåªÀ¸ÁÜ¥ÀPÀ ¸À«ÄwAiÀÄÄ PɼÀPÀAqÀ C¢üPÁgÀUÀ¼À£ÀÄß ºÁUÀÆ ¥ÀæPÁAiÀÄðUÀ¼À£ÀÄß ºÉÆA¢gÀvÀPÀÄÌzÀÄ, JAzÀgÉ:Š
(J) SÁ¸ÀV ²PÀët ¸ÀA¸ÉÜAiÀÄ ¸ÁªÀiÁ£Àå DqÀ½vÀªÀ£ÀÄß ¤ªÀð»¸ÀĪÀÅzÀÄ;
(©) SÁ¸ÀV ²PÀët ¸ÀA¸ÉÜAiÀÄ ªÀÄÄRå¸ÀÜ£À£ÀÄß ©lÄÖ, ²PÀëPÀgÀ£ÀÄß ºÁUÀÆ EvÀgÀ £ËPÀgÀgÀ£ÀÄß £ÉëĸÀĪÀÅzÀÄ;
(¹) ¸ÀA¸ÉÜAiÀÄ ªÀÄÄRå¸ÀÜ£À£ÀÄß ©lÄÖ, ²PÀëPÀgÀ ºÁUÀÆ EvÀgÀ £ËPÀgÀgÀ ªÉÄÃ¯É ²¸ÀÄÛ PÀæªÀĪÀ£ÀÄß PÉÊUÉÆ¼ÀÄîªÀÅzÀÄ;
(r) ¸ÀA¸ÉÜAiÀÄ £ËPÀgÀgÀ£ÀÄß ªÉÄðéZÁgÀuÉ ªÀiÁqÀĪÀÅzÀÄ ºÁUÀÆ CªÀgÀ£ÀÄß ¤AiÀÄAwæ¸ÀĪÀÅzÀÄ; ªÀÄvÀÄÛ
(F) UÉÆvÀÄÛ¥Àr¸À§ºÀÄzÁzÀAxÀ EvÀgÀ AiÀiÁªÀÅzÉà «µÀAiÀÄ.
(2) ªÀåªÀ¸ÁÜ¥ÀPÀ ¸À«ÄwAiÀÄÄ PÉÊUÉÆAqÀ AiÀiÁªÀÅzÉà wêÀiÁð£ÀªÀ£ÀÄß CxÀªÁ PÀæªÀĪÀ£ÀÄß, CzÀ£ÀÄß ºÁUÉ PÉÊUÉÆAqÀ ¢£À¢AzÀ ºÀ¢£ÉÊzÀÄ ¢£ÀUÀ¼ÉƼÀUÁV PÁAiÀÄðzÀ²ðAiÀÄÄ DqÀ½vÀ ¥ÀjµÀwÛUÉ w½¸ÀvÀPÀÄÌzÀÄ. ºÁUÉ PÉÊUÉÆAqÀ wêÀiÁð£À CxÀªÁ PÀæªÀĪÀ£ÀÄß vÀ£ÀUÉ w½¹zÀ E¥ÀàvÉÆÛAzÀÄ ¢£ÀUÀ¼ÉƼÀUÉ DqÀ½vÀ ¥ÀjµÀvÀÄÛ CzÀ£ÀÄß gÀzÀÄÝ¥Àr¹zÀ CxÀªÁ ªÀiÁ¥ÁðlÄ ªÀiÁrzÀ ºÉÆgÀvÀÄ, CzÀ£ÀÄß DqÀ½vÀ ¥ÀjµÀvÉÛà PÉÊUÉÆAqÀ wêÀiÁð£À CxÀªÁ PÀæªÀĪÉAzÀÄ ¨sÁ«¸ÀvÀPÀÄÌzÀÄ.
C®èzÉà ¸ÀPÁðgÀªÀÅ 2007gÀ°èAiÉÄà ªÀåªÀ¸ÁÜ¥ÀPÀ ¸À«ÄwAiÀÄ PÁAiÀÄðUÀ¼À£ÀÄß ¤AiÀĪÀÄUÀ¼À ªÀÄÆ®PÀ w½AiÀÄ¥Àr¹zÉ. D ¤AiÀĪÀĪÀÅ ¸ÀPÁðjà DzÉñÀ ¸ÀASÉå No. ED 79 VIVIDA 2003 (P), Bangalore, Dated : 24th October ೨೦೦೭ರಲ್ಲಿ ತಿಳಿಯಪಡಿಸಿದೆ.
ವ್ಯವಸ್ಥಾಪಕ ಸಮಿತಿಯಲ್ಲಿ
ಉಪನ್ಯಾಸಕ ಸದಸ್ಯರು,
ಆಡಳಿತ ಮಂಡಳಿಯ ಸದಸ್ಯರು
ಹಿಂದಿನ ನಿರ್ದೇಶಕರು ಈ ಕ್ರಮ ತೆಗೆದುಕೊಂಡಿಲ್ಲ, ಮುಂದೆ ಬರುವ ನಿರ್ದೇಶಕರು ನಿಮ್ಮಷ್ಟು ಮುತುವರ್ಜಿಯಿಂದ ಸುಧಾರಣೆ ಮಾಡುತ್ತಾರೆಂಬ ನಂಬಿಕೆ ನನಗಿಲ್ಲ. ಅದಕ್ಕೆ ರಾಜ್ಯದ ಅತ್ಯತ್ತಮ ಅಧಿಕಾರಿಯಲ್ಲಿ ನನ್ನ ಈ ಪುಟ್ಟ ಮನವಿ ಅದು ಸಾರ್ವಜನಿಕ ಹಿತಾಸಕ್ತಿ ಯೊಂದಿಗೆ .............
ಭಾರತ ದೇಶದ ಒಬ್ಬ ಸಾಮಾನ್ಯ ನಾಗರಿಕ
ಮಧು











